ADVERTISEMENT

ವ್ಯಕ್ತಿ ಕೊಲೆ: ಸಾರ್ವಜನಿಕವಾಗಿ ನೇಣಿಗೇರಿಸಿದ ತಾಲಿಬಾನ್

Taliban carry out 1st public execution since Afghan takeover

ಏಜೆನ್ಸೀಸ್
Published 8 ಡಿಸೆಂಬರ್ 2022, 13:15 IST
Last Updated 8 ಡಿಸೆಂಬರ್ 2022, 13:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌:ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಅಫ್ಗನ್ ಅಪರಾಧಿಗೆ ತಾಲಿಬಾನ್ ಅಧಿಕಾರಿಗಳು ಬುಧವಾರ ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದಾರೆ. ಕಳೆದ ವರ್ಷ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಸಾರ್ವಜನಿಕವಾಗಿ ಮರಣದಂಡನೆಗೆ ಗುರಿಯಾಗಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

2021ರಲ್ಲಿ ದೇಶವನ್ನು ವಶಪಡಿಸಿಕೊಂಡಾಗಿನಿಂದ ಜಾರಿಗೆ ತಂದ ಕಠಿಣ ನೀತಿಗಳನ್ನು ಮುಂದುವರಿಸಲು ಮತ್ತು ಇಸ್ಲಾಮಿಕ್ ಕಾನೂನು ಅಥವಾ ಷರಿಯಾದ ವ್ಯಾಖ್ಯಾನಕ್ಕೆ ಅಂಟಿಕೊಳ್ಳುವ ಉದ್ದೇಶವನ್ನು ಇದು ಪ್ರತಿಬಿಂಬಿಸಿದೆ.

ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ ಸಂತ್ರಸ್ತನ ತಂದೆ, ನೂರಾರು ಪ್ರೇಕ್ಷಕರು ಮತ್ತು ಅನೇಕ ಉನ್ನತ ತಾಲಿಬಾನ್ ಅಧಿಕಾರಿಗಳ ಸಮ್ಮುಖದಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು ಎಂದು ತಾಲಿಬಾನ್ ಸರ್ಕಾರದ ಉನ್ನತ ವಕ್ತಾರ ಜಬೀಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.

ADVERTISEMENT

ಕೆಲವು ಅಧಿಕಾರಿಗಳು ರಾಜಧಾನಿ ಕಾಬೂಲ್‌ನಿಂದ ಬಂದಿದ್ದರು.

ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನುಹೆರಾತ್ ಪ್ರಾಂತ್ಯದಿಂದ ತಜ್ಮೀರ್ ಎಂದು ಗುರುತಿಸಲಾಗಿದ್ದು, ಈತ ಐದು ವರ್ಷದ ಹಿಂದೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಬೈಕ್ ಹಾಗೂ ಮೊಬೈಲ್ ಫೋನ್ ದೋಚಿಕೊಂಡು ಪರಾರಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.