ಕಾಬುಲ್: ‘ತಾಲಿಬಾನ್ ಉಗ್ರರು ಮಂಗಳವಾರ ಖೋಸ್ಟ್ ಪ್ರಾಂತ್ಯದಲ್ಲಿರುವ ಪೊಲೀಸ್ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಹತರಾಗಿದ್ದಾರೆ’ ಎಂದು ಅಫ್ಗಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
‘ಇದುವರೆಗೂ ಮೂರು ಮೃತದೇಹಗಳು ಪತ್ತೆಯಾಗಿವೆ. ಮಿಲಿಟರಿ ಹಾಗೂ ನಾಗರಿಕರು ಸೇರಿ ಅಂದಾಜು30 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಖೋಸ್ಟ್ ಪ್ರಾಂತ್ಯದ ಆರೋಗ್ಯ ಅಧಿಕಾರಿ ಹಬೀಬ್ ಶಾ ಅನ್ಸಾರಿ ಹೇಳಿದ್ದಾರೆ.
‘ವಿಶೇಷ ಪೊಲೀಸ್ ಪಡೆಯ ನೆಲೆಯ ಸಮೀಪ ಮಂಗಳವಾರ ಮುಂಜಾನೆ ಮದ್ದು ಗುಂಡುಗಳನ್ನೊಳಗೊಂಡಿದ್ದ ವಾಹನವೊಂದು ಸ್ಫೋಟಗೊಂಡಿದೆ. ಪೊಲೀಸರು ನಾಲ್ವರು ದಾಳಿಕೋರರನ್ನು ಹೊಡೆದುರುಳಿಸಿದ್ದಾರೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರೀಕ್ ಆರನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.