ADVERTISEMENT

ಅಫ್ಗಾನಿಸ್ತಾನದಲ್ಲಿ ಡ್ರೋನ್ ಹಾರಾಟ: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ತಾಲಿಬಾನ್

ರಾಯಿಟರ್ಸ್
Published 29 ಸೆಪ್ಟೆಂಬರ್ 2021, 7:04 IST
Last Updated 29 ಸೆಪ್ಟೆಂಬರ್ 2021, 7:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾಬೂಲ್‌: ಅಫ್ಗಾನಿಸ್ತಾನದ ವಾಯು ಪ್ರದೇಶದ ಮೇಲೆ ಅಮೆರಿಕ ಡ್ರೋನ್ ಹಾರಾಟವನ್ನು ನಿಲ್ಲಿಸದಿದ್ದರೆ ಮುಂದೆ ಎದುರಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್‌ ಬುಧವಾರ ಎಚ್ಚರಿಕೆ ನೀಡಿದೆ.

‘ಅಫ್ಗಾನಿಸ್ತಾನದ ವಾಯು ಪ್ರದೇಶದಲ್ಲಿ ಡ್ರೋನ್‌ ಕಾರ್ಯಾಚರಣೆ ನಡೆಸುವ ಮೂಲಕ ಅಮೆರಿಕ ಅಂತರರಾಷ್ಟ್ರೀಯ ಹಕ್ಕುಗಳು ಮತ್ತು ಕಾನೂನನ್ನು ಉಲ್ಲಂಘಿಸಿದೆ. ಜೊತೆಗೆ, ದೋಹಾ, ಕತಾರ್‌ನಲ್ಲಿ ತಾಲಿಬಾನ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಪಾಲಿಸುವ ಬದ್ಧತೆಯನ್ನು ಮರೆತಿದೆ‘ ಎಂದು ತಾಲಿಬಾನ್‌ ಟ್ವೀಟ್‌ ಮಾಡಿದೆ.

‘ಮುಂದೆ ಎದುರಾಗಬಹುದಾದ ನಕಾರಾತ್ಮಕ ಪರಿಣಾಮಗಳನ್ನು ತಡೆಗಟ್ಟುವುದಕ್ಕಾಗಿ ಅಫ್ಗಾನಿಸ್ತಾನವನ್ನು ಅಂತರರಾಷ್ಟ್ರೀಯ ಹಕ್ಕುಗಳು, ಕಾನೂನುಗಳು ಮತ್ತು ಬದ್ಧತೆಯ ವ್ಯಾಪ್ತಿಯಲ್ಲಿ ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳು ಪರಿಗಣಿಸಬೇಕು‘ ಎಂದು ತಾಲಿಬಾನ್ ಹೇಳಿದೆ.

ADVERTISEMENT

ತಾಲಿಬಾನ್‌ ಸರ್ಕಾರದ ಈ ಹೇಳಿಕೆಗೆ ಪ್ರತಿಕ್ರಿಯೆಗಾಗಿ ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ತಕ್ಷಣಕ್ಕೆ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.