ADVERTISEMENT

ಯಾವುದೇ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ: ತಾಲಿಬಾನ್‌

ರಾಯಿಟರ್ಸ್
Published 18 ಆಗಸ್ಟ್ 2021, 2:04 IST
Last Updated 18 ಆಗಸ್ಟ್ 2021, 2:04 IST
ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ - ಎಪಿ ಚಿತ್ರ
ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ - ಎಪಿ ಚಿತ್ರ   

ಕಾಬೂಲ್‌: ಯಾವುದೇ ದೇಶದ ವಿರುದ್ಧಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಮಂಗಳವಾರ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಹಿಂದಿನ ಸರ್ಕಾರದ ಜತೆ ಕೆಲಸ ಮಾಡಿದವರ ಮತ್ತು ವಿದೇಶಿ ಸರ್ಕಾರಗಳು ಅಥವಾ ಪಡೆಗಳ ಜತೆ ಕೆಲಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ, ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ಕೂಡ ಸರ್ಕಾರದಲ್ಲಿ ಭಾಗಿಯಾಗಬಹುದು ಎಂದು ಮುಜಾಹಿದ್ ಹೇಳಿದ್ದಾರೆ.

ADVERTISEMENT

ನಾವು ಅಫ್ಗನ್‌ ಜನರಿಗೆ ಸಂಪೂರ್ಣವಾಗಿ ಕ್ಷಮಾದಾನ ನೀಡಿದ್ದೇವೆ, ಸರ್ಕಾರ ರಚನೆಯ ಕುರಿತು ಮಾತುಕತೆಗಳು ನಡೆಯುತ್ತಿದ್ದು ಇಸ್ಲಾಮಿಕ್‌ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿ ಖಾಸಗಿ ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು, ದೇಶದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ

ಹಿಂದಿನ ತಲೆಮಾರಿನ ಜನರು ತಾಲಿಬಾನ್‌ನ ಕ್ರೂರ ಆಡಳಿತ ಅನುಭವಿಸಿರುವುದು ಜನರ ಭೀತಿಗೆ ಕಾರಣವಾಗಿದೆ. ಹಾಗೇ ಅಂತರರಾಷ್ಟ್ರೀಯ ಸಮುದಾಯಗಳು ಕೂಡ ತಾಲಿಬಾನ್‌ ನಡೆಯನ್ನು ಅನುಮಾನದಿಂದ ನೋಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.