ADVERTISEMENT

ಮಹಿಳೆಯರನ್ನು ಗೌರವಿಸಲಿ ತಾಲಿಬಾನ್‌: ವಿಶ್ವಸಂಸ್ಥೆ ಮಾನವಹಕ್ಕು ವಿಭಾಗದ ಮುಖ್ಯಸ್ಥೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 11:40 IST
Last Updated 24 ಆಗಸ್ಟ್ 2021, 11:40 IST
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಮಿಶೆಲ್ ಬ್ಯಾಚೆಲೆಟ್
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಮಿಶೆಲ್ ಬ್ಯಾಚೆಲೆಟ್   

ಜಿನಿವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಮಿಶೆಲ್ ಬ್ಯಾಚೆಲೆಟ್ ಅವರು ಅಫ್ಗಾನಿಸ್ತಾನದ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ವಿಚಾರದಲ್ಲಿನ ತಾಲಿಬಾನ್‌ಗಳ ವರ್ತನೆಯನ್ನು ‘ಮೂಲಭೂತ ಕೆಂಪು ಗೆರೆ’ಯಲ್ಲಿ ಗುರುತಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿನ ಸನ್ನಿವೇಶದ ಕುರಿತ ತುರ್ತು ಸಭೆಗೂ ಮುನ್ನ ಮಾತನಾಡಿದ ಮಿಶೆಲ್‌, ‘ಹೆಣ್ಣುಮಕ್ಕಳ ಹಕ್ಕುಗಳನ್ನು ತಾಲಿಬಾನ್‌ ಗೌರವಿಸಬೇಕು, ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು. ಪ್ರತೀಕಾರದಿಂದ ದೂರವಿರಬೇಕು’ ಎಂದು ಒತ್ತಾಯಿಸಿದರು.

‘ಈ ಬದ್ಧತೆಯನ್ನು ಕೃತಿ ರೂಪಕ್ಕೆ ತರುವ ಜವಾಬ್ದಾರಿ ಈಗ ತಾಲಿಬಾನ್ ಮೇಲಿದೆ’ ಎಂದು ಅವರು ಹೇಳಿದರು.

‘ತಾಲಿಬಾನ್‌ಗಳು ಸೂಕ್ಷ್ಮ ಸಂವೇದಿ ಆಡಳಿತ ಮತ್ತು ಮಾನವ ಹಕ್ಕುಗಳ ರಕ್ಷಣೆಯಂಥ ನೀತಿಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಒಗ್ಗಟ್ಟು ಮತ್ತು ಸಮನ್ವಯತೆಯನ್ನು ಮರು ಸ್ಥಾಪಿಸಲು ಕೆಲಸ ಮಾಡಬೇಕು. ‌ದಶಕಗಳ ಸಂಘರ್ಷದಲ್ಲಿ ತಮ್ಮ ಹಕ್ಕುಗಳನ್ನು ಕಳೆದುಕೊಂಡವರನ್ನು ಗೌರವಿಸುವ ಮೂಲಕ ಇದನ್ನು ಸಾಧಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT


ಸ್ವಾತಂತ್ರ್ಯ, ಪ್ರತಿಭಟನೆಯ ಹಕ್ಕು, ಶಿಕ್ಷಣ, ಅಭಿವ್ಯಕ್ತಿ ಮತ್ತು ಉದ್ಯೋಗದ ಹಕ್ಕುಗಳಿಗೆ ತಾಲಿಬಾನ್‌ ಗೌರವ ನೀಡಬೇಕು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.