ADVERTISEMENT

ಮಾತುಕತೆ ಸ್ವರೂಪ: ಭಾರತ–ಪಾಕಿಸ್ತಾನವೇ ನಿರ್ಧರಿಸಬೇಕು– ಅಮೆರಿಕ

ಪಿಟಿಐ
Published 24 ಜನವರಿ 2023, 13:31 IST
Last Updated 24 ಜನವರಿ 2023, 13:31 IST
   

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಣ ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಸ್ವರೂಪವನ್ನು ಆ ಎರಡೂ ದೇಶಗಳೇ ತೀರ್ಮಾನಿಸಬೇಕು ಎಂದು ಅಮೆರಿಕ ತನ್ನ ನಿಲುವನ್ನು ಪುನರುಚ್ಚರಿಸಿದೆ.

ದಕ್ಷಿಣ ಏಷ್ಯಾದ ಈ ಎರಡೂ ನೆರೆಯ ದೇಶಗಳ ನಡುವಿನ ಮಾತುಕತೆಗೆ ಅಮೆರಿಕ ಸದಾ ಉತ್ತೇಜನವನ್ನು ನೀಡುತ್ತಲೇ ಬಂದಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ ಪ್ರೈಸ್ ಹೇಳಿದರು.

ಭಾರತ ಜೊತೆಗಿನ ಶಾಂತಿ ಮಾತುಕತೆ ಕುರಿತಂತೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್‌ ಅವರು ಈಚೆಗೆ ನೀಡಿದ್ದ ಹೇಳಿಕೆ ಕುರಿತು ಪಾಕಿಸ್ತಾನದ ಪತ್ರಕರ್ತರೊಬ್ಬರು ಗಮನಸೆಳೆದಾಗ ಹೀಗೆ ಪ್ರತಿಕ್ರಿಯಿಸಿದರು.

ADVERTISEMENT

ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಸ್ಥಿರತೆ ಇರಬೇಕು ಎಂಬುದು ನಮ್ಮ ಬಹುದಿನಗಳ ಅಪೇಕ್ಷೆ. ನಾವು ಅದನ್ನೇ ನಿರೀಕ್ಷಿಸುತ್ತೇವೆ. ಚರ್ಚೆಯ ಸ್ವರೂಪ, ವ್ಯಾಪ್ತಿ, ವೇಗ ಹೇಗಿರಬೇಕು ಎಂಬುದನ್ನು ಈ ಎರಡೂ ದೇಶಗಳೇ ನಿರ್ಧರಿಸಬೇಕು. ಪಾಕಿಸ್ತಾನ–ಭಾರತ ಜೊತೆಗೆ ನಮ್ಮ ಸಹಭಾಗಿತ್ವ ಎಂದಿನಂತೆ ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.