ADVERTISEMENT

ಆಸ್ಟ್ರೇಲಿಯಾದಲ್ಲಿ ತೆಲಂಗಾಣದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 18:32 IST
Last Updated 18 ಡಿಸೆಂಬರ್ 2018, 18:32 IST
   

ಹೈದರಾಬಾದ್‌: ಆಸ್ಟ್ರೇಲಿಯಾದ ನ್ಯೂಸೌತ್‌ವೇಲ್ಸ್‌ ಕರಾವಳಿಯ ಮೂನಿ ಬೀಚ್‌ನಲ್ಲಿ ತೆಲಂಗಾಣದ ಮೂವರು ಮುಳುಗಿ ಸಾವಿಗೀಡಾಗಿದ್ದಾರೆ.

ಅಪಾಯಕಾರಿ ಕಾಫ್ಸ್‌ ಹಾರ್ಬರ್‌ ಪ್ರದೇಶದಲ್ಲಿ ಆರು ಜನರ ತಂಡ ನೀರಿಗಿಳಿದಿತ್ತು. ಈ ಪೈಕಿ, ಗೌಸುದ್ದೀನ್‌ (45), ರಾಹತ್‌ (35) ಹಾಗೂ ಜುನೈದ್‌ (28) ಸಾವಿಗೀಡಾಗಿದ್ದಾರೆ. ಜುನೈದ್‌ ಅವರ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗೌಸುದ್ದೀನ್‌ ಮತ್ತು ಜುನೈದ್‌ ನಲ್ಗೊಂಡ ಜಿಲ್ಲೆಯವರಾಗಿದ್ದರೆ, ರಾಹತ್‌ ಬಿಎಚ್‌ಇಎಲ್‌ ನಿವಾಸಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇಬ್ಬರು ಬಾಲಕಿಯರು ಮತ್ತು ಬಾಲಕನನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.