ADVERTISEMENT

ಪಾಕಿಸ್ತಾನದ ಯಾವ ಪಕ್ಷದ ಪರವೂ ನಾವಿಲ್ಲ: ಅಮೆರಿಕ ಸ್ಪಷ್ಟನೆ

ಪಿಟಿಐ
Published 23 ಆಗಸ್ಟ್ 2022, 11:33 IST
Last Updated 23 ಆಗಸ್ಟ್ 2022, 11:33 IST
ನೆಡ್‌ ಪ್ರೈಸ್‌
ನೆಡ್‌ ಪ್ರೈಸ್‌   

ಇಸ್ಲಮಾಬಾದ್‌/ವಾಷಿಂಗ್ಟನ್‌ (ಪಿಟಿಐ): ‘ಪಾಕಿಸ್ತಾನದ ಯಾವ ಪಕ್ಷದ ಪರವೂ ನಾವಿಲ್ಲ. ಆ ರಾಷ್ಟ್ರದ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಕಾನೂನನ್ನು ಗೌರವಿಸುತ್ತೇವೆ. ಶಾಂತಿ ಸ್ಥಾಪನೆಯನ್ನೂ ನಾವು ಬೆಂಬಲಿಸುತ್ತೇವೆ’ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ನ ವಕ್ತಾರ ನೆಡ್‌ ಪ್ರೈಸ್‌, ‘ಇದು ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ವಿಚಾರ. ಇದಕ್ಕೂ ನಮಗೂ ಸಂಬಂಧವಿಲ್ಲ’ ಎಂದಿದ್ದಾರೆ.

‘ಅಮೆರಿಕವು ಪಾಕಿಸ್ತಾನದ ವಿರೋಧ ಪಕ್ಷಗಳ ಜೊತೆ ಸೇರಿಕೊಂಡು ನನ್ನ ವಿರುದ್ಧ ಸಂಚು ನಡೆಸುತ್ತಿದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಅಮೆರಿಕದ ಪಾತ್ರ ಮಹತ್ವದ್ದಾಗಿದೆ’ ಎಂದು ಇಮ್ರಾನ್‌ ಖಾನ್‌ ಹಲವು ಬಾರಿ ಆರೋಪಿಸಿದ್ದರು. ಈ ಆರೋಪಗಳನ್ನು ಅಮೆರಿಕ ಅಲ್ಲಗಳೆಯುತ್ತಲೇ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.