ADVERTISEMENT

ಟೆಕ್ಸಾಸ್‌: ಗನ್‌ ಹೊಂದಲು ಪರವಾನಗಿ ಅಗತ್ಯ ಇಲ್ಲ

ಮಸೂದೆಗೆ ಗವರ್ನರ್‌ ಗ್ರೆಗ್‌ ಅಬ್ಬಾಟ್ಟ್‌ ಸಹಿ

ಪಿಟಿಐ
Published 18 ಜೂನ್ 2021, 5:46 IST
Last Updated 18 ಜೂನ್ 2021, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹ್ಯೂಸ್ಟನ್‌: ಪರವಾನಗಿ ಅಥವಾ ತರಬೇತಿ ಇಲ್ಲದಿದ್ದರೂ ಹ್ಯಾಂಡ್‌ಗನ್‌ಗಳನ್ನು ಕೊಂಡೊಯ್ಯಲು ಅವಕಾಶ ನೀಡುವ ಮಸೂದೆಗೆ ಟೆಕ್ಸಾಸ್‌ ಗವರ್ನರ್‌ ಗ್ರೆಗ್‌ ಅಬ್ಬಾಟ್ಟ್‌ ಸಹಿ ಹಾಕಿದ್ದಾರೆ.

‘ಇದು ಸ್ವಾತಂತ್ರ ಮತ್ತು ಸ್ವಯಂ ರಕ್ಷಣೆ ಕಲ್ಪಿಸುವ ಕ್ರಮವಾಗಿದೆ. ಜನರು ಶಸ್ತ್ರಾಸ್ತ್ರ ಹೊಂದುವುದು ಅಗತ್ಯವಾಗಿದೆ’ ಎಂದು ಗ್ರೆಗ್‌ ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕದ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಕ್ರಮವನ್ನು ಅನುಸರಿಸಲಾಗಿದೆ. ಆದರೆ, ಟೆಕ್ಸಾಸ್‌ ಗವರ್ನರ್‌ ಅವರ ಈ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದರಿಂದ, ಮತ್ತಷ್ಟು ಹಿಂಸಾಚಾರಗಳು ಸಂಭವಿಸುತ್ತವೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಸಂತಾ ಫೆ ಹೈಸ್ಕೂಲ್‌ನಲ್ಲಿ ಸಂಭವಿಸಿದ ಗನ್‌ ಹಿಂಸಾಚಾರದಲ್ಲಿ 10 ಮಂದಿ ಸಾವಿಗೀಡಾಗಿದ್ದರು. 2019ರಲ್ಲಿ ನಡೆದ ದಾಳಿಯಲ್ಲಿ 30 ಮಂದಿ ಸಾವಿಗೀಡಾಗಿದ್ದರು. ಕಳೆದ ವಾರ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು ಮತ್ತು 13 ಮಂದಿ ಗಾಯಗೊಂಡಿದ್ದರು ಎಂದು ಹಿಂದಿನ ಕಹಿ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

ಟೆಕ್ಸಾಸ್‌ ಪೊಲೀಸ್‌ ಪಡೆ ಮುಖ್ಯಸ್ಥ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡುವವರು ಸಹ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆದರೆ, ಕಾನೂನು ಪಾಲಿಸುವ ನಾಗರಿಕರಿಗೆ ಅವರ ಹಕ್ಕು ನೀಡಿದಂತಾಗಿದೆ ಎಂದು ಮಸೂದೆ ಬೆಂಬಲಿಸುವವರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.