ಕಾಬೂಲ್: ತಾಲಿಬಾನ್ ಅಧಿಕಾರಕ್ಕೆ ಬಂದ ಮೇಲೆ ಅಫ್ಘಾನಿಸ್ತಾನದಲ್ಲಿ ಆರ್ಥಿಕತೆಯು ವೇಗವಾಗಿ ಅಧಃಪತನದ ಅಂಚಿಗೆ ಇಳಿಯುತ್ತಿದ್ದು, ಬಡತನ ಮತ್ತು ಹಸಿವಿನ ಭೀಕರತೆ ಹೆಚ್ಚುವ ಮುನ್ಸೂಚನೆಗಳು ಕಾಣಿಸಲಾರಂಭಿಸಿವೆ. ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ತಾಲಿಬಾನ್ ನಾಯಕರು ಈ ಹಿಂದಿನ ಸರ್ಕಾರದಲ್ಲಿದ್ದ ಬ್ಯಾಂಕ್‌ಗಳ ಅಧಿಕಾರಿಗಳು, ತಂತ್ರಜ್ಞರ ದುಂಬಾಲು ಬಿದ್ದಿದ್ದಾರೆ.
ಕೆಲಸಕ್ಕೆ ಮರಳುವಂತೆ ತುರ್ತು ನಿರ್ದೇಶನ ನೀಡಿರುವ ತಾಲಿಬಾನ್ ನಾಯಕರು, ‘ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಕೆಲಸಗಳನ್ನು ಮಾಡಿ’ ಎನ್ನುವ ಆದೇಶ ಕೊಟ್ಟಿದ್ದಾರೆ.
ಹಿಂದಿನ ಸರ್ಕಾರದ ಹಣಕಾಸು ಸಚಿವಾಲಯ, ಕೇಂದ್ರೀಯ ಬ್ಯಾಂಕ್ ಮತ್ತು ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಉದ್ಯೋಗ ಮಾಡುತ್ತಿದ್ದವರಿಗೆ ತಕ್ಷಣ ಕರ್ತವ್ಯಕ್ಕೆ ಮರಳುವಂತೆ ತಾಲಿಬಾನ್ ಆಡಳಿತಗಾರರು ಆದೇಶಿಸಿದ್ದಾರೆ ಎಂದು ಹಣಕಾಸು ಸಂಸ್ಥೆಗಳ ನಾಲ್ವರು ಉದ್ಯೋಗಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಇದನ್ನು ಮೂವರು ತಾಲಿಬಾನ್ ಅಧಿಕಾರಿಗಳು ಕೂಡ ದೃಢಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.