ADVERTISEMENT

ಬಾಲಿ: ಮೂವರು ವಲಸೆ ಅಧಿಕಾರಿಗಳ ಬಂಧನ

ಅಂಗಾಂಗ ಅಕ್ರಮ ಸಾಗಣೆ ಜಾಲದ ಜೊತೆ ನಂಟು

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 13:24 IST
Last Updated 29 ಜುಲೈ 2023, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ: ಅಂಗಾಂಗ ಅಕ್ರಮ ಸಾಗಣೆ ಜಾಲದ ಜೊತೆಗೆ ನಂಟು ಹೊಂದಿದ್ದ ಆರೋಪಕ್ಕೆ ಸಂಬಂಧಿಸಿ ಬಾಲಿಯ ಮೂವರು ವಲಸೆ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಇಂಡೋನೇಷ್ಯಾದ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೂತ್ರಪಿಂಡ ಮಾರಾಟ ಮಾಡುವವರನ್ನು ಈ ಜಾಲವು ಕಾಂಬೋಡಿಯಾಕ್ಕೆ ಕರೆದೊಯ್ದಿತ್ತು. ಅಂಗಾಂಗ ಮಾರಾಟಕ್ಕಾಗಿ ಜನರನ್ನು ಕರೆದೊಯ್ಯುವಾಗ ಅವರ ವಲಸೆ ತಪಾಸಣೆಗೆ ಈ ಅಧಿಕಾರಿಗಳು ಸಹಕರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 

ಅಂಗಾಂಗ ಅಕ್ರಮ ಸಾಗಣೆ ಜಾಲವನ್ನು ಕಳೆದ ವಾರ ಭೇದಿಸಿದ್ದ ಪೊಲೀಸರು 12 ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ಪೊಲೀಸ್‌ ಅಧಿಕಾರಿಯೂ ಸೇರಿದ್ದಾರೆ.

ADVERTISEMENT

122 ಮಂದಿಯನ್ನು ಅಂಗಾಂಗ ಮಾರಾಟಕ್ಕಾಗಿ ವಿದೇಶಗಳಿಗೆ ಕರೆದೊಯ್ಯಲು ಯತ್ನಿಸುತ್ತಿದ್ದ ವೇಳೆ ಇವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರು ನೀಡಿದ ಮಾಹಿತಿ ಅನ್ವಯ ವಲಸೆ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ

ಮಾರ್ಚ್‌ ಮತ್ತು ಜೂನ್‌ ನಡುವೆ 18 ಮಂದಿಯನ್ನು ಮೂತ್ರಪಿಂಡ ಮಾರಾಟಕ್ಕಾಗಿ ಬಾಲಿಯಿಂದ ಕಾಂಬೋಡಿಯಾಕ್ಕೆ ಕರೆದೊಯ್ಯಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.