ADVERTISEMENT

ಇಂಡಿಯಾದ ಮೇಲಿನ ಸುಂಕ ತೆಗೆಯಿರಿ: ಅಮೆರಿಕ ಸಂಸತ್‌ನಲ್ಲಿ ಭಾರತ ಮೂಲದ ಸಂಸದರು

ಪಿಟಿಐ
Published 13 ಡಿಸೆಂಬರ್ 2025, 16:02 IST
Last Updated 13 ಡಿಸೆಂಬರ್ 2025, 16:02 IST
ಅಮೆರಿಕ ಕಾಂಗ್ರೆಸ್‌ನ ಡೆಮಕ್ರಟಿಕ್‌ ಪಕ್ಷದ ಸದಸ್ಯ ರಾಜಾ ಕೃಷ್ಣಮೂರ್ತಿ
ಅಮೆರಿಕ ಕಾಂಗ್ರೆಸ್‌ನ ಡೆಮಕ್ರಟಿಕ್‌ ಪಕ್ಷದ ಸದಸ್ಯ ರಾಜಾ ಕೃಷ್ಣಮೂರ್ತಿ    

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಹೇರಿರುವ ಹೆಚ್ಚುವರಿ ಸುಂಕವನ್ನು ರದ್ದು ಮಾಡಬೇಕು ಎಂದು ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಸೇರಿ ಮೂವರು ಪ್ರಭಾವಶಾಲಿ ಸಂಸದರು ಶುಕ್ರವಾರ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ.

ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಇತರೆ ದೇಶಗಳ ಮೇಲೆ ಶೇ 50ರಷ್ಟು ಸುಂಕ ಹೇರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಟ್ರಂಪ್‌ ಅವರು ಭಾರತವೂ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕ ಹೇರಿದ್ದಾರೆ. ಈ ಅಧಿಕಾರವನ್ನು ಕೊನೆಗೊಳಿಸಲು ನಿರ್ಣಯ ಮಂಡಿಸಲಾಗಿದೆ.

‘ಈ ರೀತಿಯ ಸುಂಕ ಹೇರಿಕೆಯಿಂದ ಭಾರತದಂಥ ಮುಖ್ಯ ಪಾಲುದಾರ ದೇಶದೊಂದಿಗಿನ ಸಂಬಂಧವು ಹಳಸಲಿದೆ ಮತ್ತು ಇದು ಅಮೆರಿಕಕ್ಕೆ ಮಾರಕವಾಗಲಿದೆ’ ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.