ADVERTISEMENT

ಸೊಮಾಲಿಯಾದ ಮೊಗದಿಶುವಿನಲ್ಲಿ ಕಾರ್‌ ಬಾಂಬ್‌ ಸ್ಫೋಟ– ಮೂವರ ಸಾವು

ಏಜೆನ್ಸೀಸ್
Published 13 ಫೆಬ್ರುವರಿ 2021, 16:49 IST
Last Updated 13 ಫೆಬ್ರುವರಿ 2021, 16:49 IST
ಸೊಮಾಲಿಯಾದ ರಾಜಧಾನಿ ಮೊಗದಿಶುನಲ್ಲಿ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ನಡೆದ ಕಾರ್‌ಬಾಂಬ್‌ ಸ್ಫೋಟ (ಎಎಫ್‌ಪಿ ಚಿತ್ರ)
ಸೊಮಾಲಿಯಾದ ರಾಜಧಾನಿ ಮೊಗದಿಶುನಲ್ಲಿ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ನಡೆದ ಕಾರ್‌ಬಾಂಬ್‌ ಸ್ಫೋಟ (ಎಎಫ್‌ಪಿ ಚಿತ್ರ)   

ಮೊಗದಿಶು: ಸೊಮಾಲಿಯಾದ ರಾಜಧಾನಿ ಮೊಗದಿಶುನಲ್ಲಿ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ನಡೆದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಫೋಟಗೊಂಡ ಸ್ಥಳದಿಂದ ಕೆಲವು ಕಿಲೋ ಮೀಟರ್‌ ದೂರದಲ್ಲಿಯೇ ಪೊಲೀಸರು ಕಾರ್‌ ಅನ್ನು ಬೆನ್ನಹತ್ತಿದ್ದರು. ಕಾರ್‌ ಮೇಲೆ ಗುಂಡು ಹಾರಿಸಿದ್ದರಿಂದ ಅನೇಕ ಜನರು ಸ್ಥಳದಿಂದ ದೂರ ಓಡಿದ್ದರು. ಹೀಗಾಗಿ ಸಾವು–ನೋವಿನ ಸಂಖ್ಯೆ ಕಡಿಮೆಯಾಗಿದೆ’ ಎಂದು ಅಧಿಕಾರಿ ಅಬ್ದಿರ್‌ರೆಹಮಾನ್‌ಮೊಹಮ್ಮದ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT