ADVERTISEMENT

ಕೊರೊನಾ ಸೋಂಕಿನ ಭೀತಿ: ಪವಿತ್ರ ಹಜ್ ಯಾತ್ರೆ ರದ್ದು ಸಾಧ್ಯತೆ?

ಏಜೆನ್ಸೀಸ್
Published 17 ಜೂನ್ 2020, 3:06 IST
Last Updated 17 ಜೂನ್ 2020, 3:06 IST
ಹಜ್‌ ಯಾತ್ರೆ (ಪ್ರಾತಿನಿಧಿಕ ಚಿತ್ರ)
ಹಜ್‌ ಯಾತ್ರೆ (ಪ್ರಾತಿನಿಧಿಕ ಚಿತ್ರ)   

ರಿಯಾದ್ (ಸೌದಿ ಅರೆಬಿಯಾ): ಕೊರೊನಾ ಸೋಂಕಿನಿಂದಾಗಿ ಪವಿತ್ರ ಹಜ್ ಯಾತ್ರೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಆಡಳಿತಗಾರರು ತಿಳಿಸಿದ್ದಾರೆ.

1932 ರಿಂದಕಳೆದ ವರ್ಷದವರೆಗೆ ಯಾವುದೇ ಅಡೆತಡೆ ಇಲ್ಲದೆ ಹಜ್ ಯಾತ್ರೆ ನಡೆದಿದೆ. ಈ ಬಾರಿ ಸೋಂಕು ಹರಡುವ ಭೀತಿಯಿಂದ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸೌದಿ ಅರೆಬಿಯಾದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 1052 ಮಂದಿ ಮೃತಪಟ್ಟಿದ್ದು 1.36 ಲಕ್ಷ ಜನರಿಗೆ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿವೆ.

ಹಜ್ ಯಾತ್ರೆಯ ಅಂತಿಮ ಧಾರ್ಮಿಕ ಆಚರಣೆಗಳು ಬರುವ ಜುಲೈ ಕೊನೆಯ ವಾರದಲ್ಲಿ ನಡೆಯಬೇಕಿತ್ತು. ಸೋಂಕಿನ ಭೀತಿಯಿಂದಾಗಿ ಈ ಆಚರಣೆಗಳನ್ನು ರದ್ದು ಪಡಿಸಲಾಗುವುದು ಎಂದು ಸೌದಿ ಅರೆಬಿಯಾ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಮಾರ್ಚ್ 2 ರಿಂದ ಮುಸಲ್ಮಾನರ ಪವಿತ್ರ ಯಾತ್ರಾಸ್ಥಳ ಮೆಕ್ಕಾ ಮದೀನಕ್ಕೆ ವಿಶ್ವದ ಯಾವುದೇ ರಾಷ್ಟ್ರದಿಂದ ಭಕ್ತರು ಬರದಂತೆ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಹಜೆ ಯಾತ್ರೆ ತೀರ್ಮಾನ ಕುರಿತಂತೆ ನಿರ್ಧಾರ ಪ್ರಕಟಿಸುವಂತೆ ಸೌದಿಅರೆಬಿಯಾದ ಮೇಲೆ ಇತರೆ ಮುಸ್ಲಿಂ ದೇಶಗಳು ಒತ್ತಡ ಹಾಕುತ್ತಿವೆ. ಸೋಂಕು ನಿಯಂತ್ರಣಕ್ಕೆ ಬಂದರೆ ಜುಲೈ ಕೊನೆಯ ವಾರದಲ್ಲಿ ಸರಳವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವ ಬಗ್ಗೆಯೂ ಸೌದಿಅರೆಬಿಯಾ ಸರ್ಕಾರ ಚಿಂತನೆ ನಡೆಸಿರುವುದರಿಂದ ನಿರ್ಧಾರ ಪ್ರಕಟಿಸಲು ವಿಳಂಬವಾಗುತ್ತಿದೆ ಎನ್ನಲಾಗಿದೆ. ಶೀಘ್ರದಲ್ಲಿ ಅಂತಿಮ ಪ್ರಕಟಣೆ ಹೊರಡಿಸಲಾಗುವುದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ ಸುಮಾರು 25 ಲಕ್ಷ ಜನರು ಹಜ್‌ ಯಾತ್ರೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.