ADVERTISEMENT

ಟೊಂಗಾ: ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ, ಸುನಾಮಿ ಎಚ್ಚರಿಕೆ

ಏಜೆನ್ಸೀಸ್
Published 15 ಜನವರಿ 2022, 11:06 IST
Last Updated 15 ಜನವರಿ 2022, 11:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವೆಲ್ಲಿಂಗ್ಟನ್‌, ನ್ಯೂಜಿಲೆಂಡ್‌ (ಎಪಿ): ಸಮುದ್ರದೊಳಗೆ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪೆಸಿಫಿಕ್‌ ರಾಷ್ಟ್ರ ಟೊಂಗಾ ಶನಿವಾರ ಸುನಾಮಿಯ ಎಚ್ಚರಿಕೆ ನೀಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ವಿಡಿಯೊದಲ್ಲಿ ಸಮುದ್ರದ ತಟಗಳತ್ತ ದೈತ್ಯ ಅಲೆಗಳು ನುಗ್ಗಿ ಬರುತ್ತಿರುವುದು ಸೆರೆಯಾಗಿದೆ.

ಟೊಂಗಾದ ಎಲ್ಲಾ ಪ್ರಜೆಗಳಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದೆ ಎಂದು ಟೊಂಗಾ ಹವಾಮಾನ ಸೇವೆಗಳ ಸಂಸ್ಥೆಯು ತಿಳಿಸಿದೆ. ಈ ಬಗ್ಗೆ ನೆರೆಯ ಫಿಜಿ ರಾಷ್ಟ್ರದ ಅಧಿಕಾರಿಗಳಿಗೂ ಎಚ್ಚರಿಕೆಯೊಂದನ್ನು ನೀಡಲಾಗಿದ್ದು ಭಾರಿ ಪ್ರವಾಹ ಮತ್ತು ಅಪಾಯಕಾರಿ ಅಲೆಗಳ ಭೀತಿ ಇರುವುದರಿಂದ ಜನರಿಗೆ ಕಡಲ ತೀರವನ್ನು ತೊರೆಯುವಂತೆ ಸೂಚಿಸಿದೆ.

ADVERTISEMENT

ಸುನಾಮಿ ಎಚ್ಚರಿಕೆ ಹಿನ್ನೆಲೆ ಸಮುದ್ರ ತೀರದ ಅರಮನೆಯಲ್ಲಿನ ಟೊಂಗಾದ ರಾಜ ಟುಪೌ VI ಅವರನ್ನು ಪೊಲೀಸ್‌ ಮತ್ತು ಮಿಲಿಟರಿ ಪಡೆಯ ಬೆಂಗಾವಲು ಸಿಬ್ಬಂದಿ ಸ್ಥಳಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.