ADVERTISEMENT

ಏಷ್ಯಾ ಪ್ರವಾಸ ಕೈಗೊಂಡ ಟ್ರಂಪ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಮಾತುಕತೆ

ಏಜೆನ್ಸೀಸ್
Published 25 ಅಕ್ಟೋಬರ್ 2025, 13:20 IST
Last Updated 25 ಅಕ್ಟೋಬರ್ 2025, 13:20 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ಏರ್‌ಫೋರ್ಸ್‌ ಒನ್‌ ವಿಮಾನ: ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸುವುದು ಸೇರಿ ವಿವಿಧ ದೇಶಗಳ ನಾಯಕರ ಭೇಟಿ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಶನಿವಾರ ಏಷ್ಯಾ ಪ್ರವಾಸ ಕೈಗೊಂಡಿದ್ದಾರೆ.

ಇದೆ ವೇಳೆ, ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್ ಅವರನ್ನೂ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಭಾನುವಾರ ಮಲೇಷ್ಯಾಕ್ಕೆ ಭೇಟಿ ನೀಡುವ ಅವರು, ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಸಮರವನ್ನು ಕೊನೆಗೊಳಿಸುವ ಸಲುವಾಗಿ ಕೈಗೊಂಡಿರುವ ಪ್ರಾದೇಶಿಕ ಪ್ರವಾಸದ ಕೊನೆಯ ದಿನವಾದ ಗುರುವಾರ ಟ್ರಂಪ್ ಅವರು ಜಿನ್‌ಪಿಂಗ್‌ ಅವರನ್ನು ಉತ್ತರ ಕೊರಿಯಾದಲ್ಲಿ ಭೇಟಿ ಮಾಡಲಿದ್ದಾರೆ.

ADVERTISEMENT

‘ಜಿನ್‌ಪಿಂಗ್ ಜೊತೆ ಉತ್ತಮ ಮಾತುಕತೆ ನಡೆಯುವ ಭರವಸೆ ಇದೆ. ಚೀನಾದ ಮೇಲೆ ಹೇರಲಾಗಿರುವ ಶೇ100ರಷ್ಟು ಸುಂಕ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಆದರೆ, ಈ ಸುಂಕದ ಹೊರೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ‘ ಎಂದು ಟ್ರಂಪ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.