ADVERTISEMENT

ಟ್ರಂಪ್‌ ಆರೋಗ್ಯ ಉತ್ತಮ: ಶ್ವೇತಭವನ

ಪಿಟಿಐ
Published 9 ಫೆಬ್ರುವರಿ 2019, 18:42 IST
Last Updated 9 ಫೆಬ್ರುವರಿ 2019, 18:42 IST

ವಾಷಿಂಗ್ಟನ್‌: ‘ಅಮೆರಿಕ ಅಧ್ಯಕ್ಷ, 72 ವರ್ಷ ವಯೋಮಾನದ ಡೊನಾಲ್ಡ್‌ ಟ್ರಂಪ್‌ ಅವರು ಮದ್ಯಪಾನ ಹಾಗೂ ಧೂಮಪಾನದಿಂದ ದೂರ. ಶ್ವೇತಭವನದ ಆವರಣದಲ್ಲಿ ನಿಯಮಿತವಾಗಿ ನಡೆಯುವುದನ್ನು ರೂಢಿಸಿಕೊಂಡಿದ್ಧಾರೆ. ಹೀಗಾಗಿ ಅವರು ಉತ್ತಮ ಆರೋಗ್ಯ ಹೊಂದಿದ್ದಾರೆ ಎಂದು ಟ್ರಂಪ್‌ ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಫಾಸ್ಟ್‌ ಫುಡ್‌ಗಳನ್ನು ಇಷ್ಟಪಡುವ ಟ್ರಂಪ್‌ ವೈಟ್ ಹೌಸ್‌ಗೆ ಸಹೋದ್ಯೋಗಿಗಳು, ಅತಿಥಿಗಳು ಬಂದಾಗ ಬರ್ಗರ್‌, ಫ್ರೆಂಚ್‌ ಫ್ರೈಸಿಸ್‌, ಪಿಜ್ಜಾಗಳನ್ನು ತರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT