ADVERTISEMENT

ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಅಮೆರಿಕ ಹೋರಾಟ: ಡೊನಾಲ್ಡ್‌ ಟ್ರಂಪ್‌

ಮಾದಕ ವಸ್ತುಗಳ ಕಳ್ಳಸಾಗಣೆ ರಾಷ್ಟ್ರಗಳಲ್ಲಿ ಭಾರತ; ಟ್ರಂಪ್

ಪಿಟಿಐ
Published 17 ಸೆಪ್ಟೆಂಬರ್ 2020, 11:52 IST
Last Updated 17 ಸೆಪ್ಟೆಂಬರ್ 2020, 11:52 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಭಾರತ ಸೇರಿದಂತೆ 20 ರಾಷ್ಟ್ರಗಳನ್ನು ಅಕ್ರಮ ಮಾದಕ ವಸ್ತುಗಳ ಸಾಗಣೆದಾರ ಅಥವಾ ಅಕ್ರಮ ಮಾದಕ ವಸ್ತುಗಳ ಉತ್ಪಾದನಾ ರಾಷ್ಟ್ರಗಳೆಂದು ಗುರುತಿಸಿರುವಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಆಡಳಿತವು, ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಅಫ್ಗಾನಿಸ್ತಾನ, ಭಾರತ, ದಿ ಬಹಾಮಾಸ್, ಕೊಲಂಬಿಯಾ, ಕೋಸ್ಟಾ ರಿಕಾ ಮತ್ತು ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಇಪ್ಪತ್ತು ರಾಷ್ಟ್ರಗಳನ್ನು ಹೆಸರಿಸಿರುವ ಟ್ರಂಪ್‌, ಈ ರಾಷ್ಟ್ರಗಳುಪ್ರಮುಖ ಮಾದಕ ವಸ್ತುಗಳನ್ನು ಅಕ್ರಮವಾಗಿ ಉತ್ಪಾದಿಸುವ ರಾಷ್ಟ್ರಗಳಾಗಿವೆ ಎಂದು ಹೇಳಿದ್ದಾರೆ.

‘ಬೊಲಿವಿಯಾ ಮತ್ತು ವೆನಿಜುಯೆಲಾದ ನಿಕೊಲಾಸ್ ಮಡ್ಯುರೊ ಆಡಳಿತವು ಕಳೆದ ಹನ್ನೆರಡು ತಿಂಗಳಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಒಪ್ಪಂದದ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ‘ ಎಂದು ಹೇಳಿದ್ದಾರೆ.

ADVERTISEMENT

ಕೊಲಂಬಿಯಾದ ಅಧ್ಯಕ್ಷ ಇವಾನ್ ಡುಕ್ ಆಡಳಿತ ಅಮೆರಿಕದೊಂದಿಗೆ ಬಲವಾದ ಪಾಲುದಾರನಾಗಿ ಉಳಿದುಕೊಂಡಿದೆ ಮತ್ತು ಕೊಲಂಬಿಯಾದ ಪೊಲೀಸರು ಮತ್ತು ಸೇನಾಪಡೆಗಳು ಪ್ರಮುಖ ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಹೋರಾಡುತ್ತಿವೆ. ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣದ ವಿಚಾರದಲ್ಲಿ ಧೈರ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.