ADVERTISEMENT

ಇರಾನ್ ಮೇಲೆ ಆರ್ಥಿಕ ದಿಗ್ಬಂಧನ

ಒತ್ತಡ ಹೆಚ್ಚಿಸಲು ಅಮೆರಿಕ ನಿರ್ಧಾರ

ಪಿಟಿಐ
Published 24 ಜೂನ್ 2019, 20:15 IST
Last Updated 24 ಜೂನ್ 2019, 20:15 IST
   

ವಾಷಿಂಗ್ಟನ್ (ಪಿಟಿಐ): ಇರಾನ್‌ ಮೇಲೆ ಹೊಸದಾಗಿ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಹೇರುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ.

ಅಮೆರಿಕದ ಡ್ರೋನ್ ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿದಕ್ಕೆ ಪ್ರತಿಯಾಗಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ. ‘ಇರಾನ್ ಸೇರಿದಂತೆ ಯಾವುದೇ ದೇಶದ ಜೊತೆ ಬಿಕ್ಕಟ್ಟು ಉಂಟಾಗುವುದನ್ನು ನಾವು ಬಯಸುವುದಿಲ್ಲ. ಆ ರಾಷ್ಟ್ರವು ಬಯಸಿದರೆ ನಾಳೆಯೇ ಆರ್ಥಿಕ ದಿಗ್ಬಂಧನವನ್ನು ಕೊನೆಗೊಳಿಸಬಹುದು ಇಲ್ಲವೇ ವರ್ಷಗಳ ವರೆಗೆ ಮುಂದುವರಿಸಬಹುದು’ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಯೋಜನೆಯನ್ನು ಟ್ರಂಪ್ ಶುಕ್ರವಾರ ತಡೆಹಿಡಿದಿದ್ದರು.

ADVERTISEMENT

ಇರಾನ್‌ ಸರ್ಕಾರದ ಹಿರಿಯ ನಾಯಕರು ಹಾಗೂ ಅಧಿಕಾರಿಗಳಿಗೆ ಹಣಕಾಸು ಬಳಸಿಕೊಳ್ಳಲು ಅಮೆರಿಕದ ಈ ಆದೇಶವು ಅಡ್ಡಿಯಾಗಲಿದೆ.

ಖಜಾನೆ ಇಲಾಖೆ ಕಾರ್ಯದರ್ಶಿ ಸ್ಟೀವನ್ ಮುಚಿನ್ ಅವರ ಸಮ್ಮುಖದಲ್ಲಿ ಸಹಿ ಹಾಕಿದಟ್ರಂಪ್, ಟೆಹರಾನ್ ಮೇಲೆ ಒತ್ತಡ ಹೇರಿಕೆಯನ್ನು ಅಮೆರಿಕ ಮುಂದುವರಿಸುತ್ತದೆ ಎಂದಿದ್ದಾರೆ.

‘ಇರಾನ್ ಬಗ್ಗೆ ನಾವು ಸಾಕಷ್ಟು ಸಹಾನುಭೂತಿ ತೋರಿದ್ದೇವೆ. ಮುಂದೆಯೂ ಹೀಗೆಯೇ ಇರುತ್ತದೆ ಎಂದು ಹೇಳಲಾಗದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಡ್ರೋನ್ ಹೊಡೆದು ಹಾಕಿದ್ದಕ್ಕೆ ಇರಾನ್ ಮೇಲೆ ಈ ಕ್ರಮ ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್ ನೇರವಾಗಿ ಉತ್ತರಿಸಲಿಲ್ಲ. ‘ಅಮೆರಿಕದಲ್ಲಿ ಇರಾನ್‌ನ ಹಲವರು ನಾಗರಿಕರು ಇದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಅವರೆಲ್ಲಾ ಒಳ್ಳೆಯ ಜನರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.