ವಾಷಿಂಗ್ಟನ್:ನ್ಯಾಯಾಧೀಶೆ ಅಮಿ ಕೋನಿ ಬರೆಟ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮನಿರ್ದೇಶನ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ರುಥ್ ಬೇಡರ್ ಜಿನ್ಸ್ಬರ್ಗ್ ಅವರ ನಿಧನದಿಂದ ಆ ಸ್ಥಾನ ತೆರವಾಗಿತ್ತು.
48 ವರ್ಷದ ಬರೆಟ್ ಅವರು ಪ್ರಸ್ತುತ 7ನೇ ಸರ್ಕೀಟ್ ಕೋರ್ಟ್ನ (ಅಪೀಲುಗಳು) ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು 2017ರಲ್ಲಿ ಈ ಸ್ಥಾನಕ್ಕೆ ಟ್ರಂಪ್ ನಾಮನಿರ್ದೇಶನ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.