ADVERTISEMENT

ಅಧ್ಯಕ್ಷರಾದ ವರ್ಷ ಟ್ರಂಪ್‌ ಪಾವತಿಸಿದ ತೆರಿಗೆ ₹ 55,000 ಮಾತ್ರ!

‘ನ್ಯೂಯಾರ್ಕ್ ಟೈಮ್ಸ್‌’ ಪ್ರಕಟಿಸಿದ ವರದಿ ಅಲ್ಲಗಳೆದ ಟ್ರಂಪ್

ಪಿಟಿಐ
Published 28 ಸೆಪ್ಟೆಂಬರ್ 2020, 7:06 IST
Last Updated 28 ಸೆಪ್ಟೆಂಬರ್ 2020, 7:06 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌:ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ವರ್ಷ 2016ರಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಕೇವಲ ₹ 55,000 (750 ಡಾಲರ್) ಆದಾಯ ತೆರಿಗೆ ಪಾವತಿಸಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

2017ರಲ್ಲಿಯೂ ಇಷ್ಟೇ ಮೊತ್ತದಷ್ಟು ತೆರಿಗೆ ಪಾವತಿಸಿದ್ದಾರೆ. ಆದರೆ, ಟ್ರಂಪ್‌ ಒಡೆತನದ ಕಂಪನಿಗಳುಭಾರತದಲ್ಲಿ 2017ರಲ್ಲಿ ₹ 1.06 ಕೋಟಿ ಆದಾಯ ತೆರಿಗೆ (143,400 ಡಾಲರ್‌) ಪಾವತಿಸಿವೆ ಎಂದೂ ಪತ್ರಿಕೆ ವರದಿ ಮಾಡಿದೆ.

ಈ ವರದಿ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇದು ಸಂಪೂರ್ಣ ಸುಳ್ಳು ಸುದ್ದಿ’ ಎಂದು ಹೇಳಿದ್ದಾರೆ. ‘ನಾನು ತೆರಿಗೆಯನ್ನು ಪಾವತಿಸಿದ್ದೇನೆ. ಲೆಕ್ಕಪರಿಶೋಧನೆಯೂ ನಡೆಯುತ್ತಿದೆ’ ಎಂದೂ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಡೆಮಾಕ್ರಟಿಕ್‌ ಪಕ್ಷದ ನಾಯಕ, ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಅವರೊಂದಿಗೆ ಚರ್ಚೆ ಇದೇ ಮಂಗಳವಾರ ನಿಗದಿಯಾಗಿದ್ದು, ಅದಕ್ಕೂ ಮುನ್ನವೇ ಈ ವರದಿ ಪ್ರಕಟವಾಗಿರುವುದು ಭಾರಿ ಚರ್ಚೆಯನ್ನೇ ಹುಟ್ಟು ಹಾಕಿದೆ.

ಕಳೆದ 15 ವರ್ಷಗಳ ಪೈಕಿ 10 ವರ್ಷಗಳ ಕಾಲ ಡೊನಾಲ್ಡ್‌ ಆದಾಯ ತೆರಿಗೆಯನ್ನೇ ಪಾವತಿಸಿಲ್ಲ. ಆದಾಯಕ್ಕಿಂತ ನಷ್ಟವೇ ಹೆಚ್ಚು ಎಂಬುದಾಗಿ ಲೆಕ್ಕ ತೋರಿಸಿದ ಕಾರಣ ಟ್ರಂಪ್‌ ತೆರಿಗೆ ಪಾವತಿಸಿಲ್ಲ ಎಂದೂ ನ್ಯೂಯಾರ್ಕ್‌ ಟೈಮ್ಸ್‌ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.