ADVERTISEMENT

ಜರ್ಮನಿಯಲ್ಲಿರುವ ಅಮೆರಿಕ ಸೇನಾಪಡೆಗಳನ್ನು ಹಿಂದೆ ಕರೆಸಿಕೊಳ್ಳಲು ಟ್ರಂಪ್‌ ಚಿಂತನೆ

ಏಜೆನ್ಸೀಸ್
Published 14 ಜೂನ್ 2020, 11:09 IST
Last Updated 14 ಜೂನ್ 2020, 11:09 IST
ಡೊನಾಲ್ಡ್‌ ಟ್ರಂಪ್‌ 
ಡೊನಾಲ್ಡ್‌ ಟ್ರಂಪ್‌    

ಬರ್ಲಿನ್‌: ಜರ್ಮನಿಯಲ್ಲಿರುವ ಅಮೆರಿಕದ ಸೇನಾಪಡೆಯನ್ನು ಶೇ 25ರಷ್ಟು ಕಡಿತ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಿಂತನೆ ನಡೆಸಿದ್ದಾರೆ.

ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ನೀಡದೇ ಹೋದರೆ ಸೇನಾಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಎಚ್ಚರಿಕೆಯನ್ನುಕಳೆದ ಒಂದು ವರ್ಷದಿಂದ ಅಮೆರಿಕ ನೀಡುತ್ತಿತ್ತು. ಪ್ರಸ್ತುತ ಜರ್ಮನಿಯಲ್ಲಿ 34,500 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೆಪ್ಟೆಂಬರ್ ಒಳಗಾಗಿ ಸೇವೆಯಲ್ಲಿರುವ ಸಿಬ್ಬಂದಿ ಸಂಖ್ಯೆಯನ್ನು 25 ಸಾವಿರಕ್ಕೆ ಕಡಿತಗೊಳಿಸಲು ಅಮೆರಿಕ ಚಿಂತನೆ ನಡೆಸಿದೆ.

ಈ ತೀರ್ಮಾನದ ಕುರಿತು ಜರ್ಮನಿ ಅಥವಾ ನ್ಯಾಟೊ ಸದಸ್ಯ ರಾಷ್ಟ್ರಗಳ ಜೊತೆ ಅಮೆರಿಕ ಚರ್ಚಿಸಿಲ್ಲ ಹಾಗೂ ಕಾಂಗ್ರೆಸ್‌ಗೂ (ಸಂಸತ್ತು) ಈ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿಲ್ಲ. ಈ ಕಾರಣದಿಂದಾಗಿ ‘ಹೌಸ್‌ ಆರ್ಮ್‌ಡ್‌ ಸರ್ವೀಸ್‌’ ಸಮಿತಿಯಲ್ಲಿರುವ ರಿಪಬ್ಲಿಕನ್‌ ಪಕ್ಷದ 22 ಸದಸ್ಯರು ಈ ಚಿಂತನೆಯನ್ನು ಪುನರ್‌ಪರಿಶೀಲಿಸಲು ಆಗ್ರಹಿಸಿ ಟ್ರಂಪ್‌ಗೆ ಪತ್ರ ಬರೆದಿದ್ದಾರೆ.

ADVERTISEMENT

‘ರಷ್ಯಾದಿಂದ ಇರುವ ಅಪಾಯ ಕಡಿಮೆಯಾಗಿಲ್ಲ. ಈ ನಡೆಯಿಂದ ನ್ಯಾಟೊ ಮೇಲಿರುವ ಅಮೆರಿಕದ ಬದ್ಧತೆ ದುರ್ಬಲವಾಗಲಿದ್ದು, ರಷ್ಯಾದ ಅಪ್ರಚೋದಿತ ಆಕ್ರಮಣಕ್ಕೆ ಎಡೆಮಾಡಿಕೊಡಲಿದೆ’ ಎಂದು ಟೆಕ್ಸಾಸ್‌ನ ಮ್ಯಾಕ್‌ ಥಾರ್ನ್‌ಬೆರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಇದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಮಾಡುತ್ತಿರುವ ಮತ್ತೊಂದು ಸಹಾಯ’ ಎಂದು ಸೆನೆಟರ್‌ ಜ್ಯಾಕ್‌ ರೀಡ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.