
ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕಕ್ಕೆ ಬರುವ ವಲಸಿಗರಿಗೆ ನೀಡುವ ಸೌಲಭ್ಯಗಳು/ನೆರವಿನ ವಿವರ ಹಾಗೂ ಸಂಬಂಧಿಸಿದ ದೇಶಗಳ ಪಟ್ಟಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ.
ಪಾಕಿಸ್ತಾನ, ಭೂತಾನ್, ಚೀನಾ, ಬಾಂಗ್ಲಾದೇಶ, ನೇಪಾಳ ಸೇರಿ 120 ರಾಷ್ಟ್ರಗಳ ಹೆಸರು ಈ ಪಟ್ಟಿಯಲ್ಲಿವೆ. ಈ ಪಟ್ಟಿಯನ್ನು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುಥ್ ಸೋಷಿಯಲ್’ನಲ್ಲಿ ಟ್ರಂಪ್ ಪ್ರಕಟಿಸಿದ್ದಾರೆ.
ವಲಸಿಗರು ಜನಿಸಿದ ದೇಶ ಹಾಗೂ ಅವರಿಗೆ ಅಮೆರಿಕದಲ್ಲಿ ನೀಡಲಾಗುವ ನೆರವಿನ ಪ್ರಮಾಣವನ್ನು ಸಹ ಈ ಪಟ್ಟಿಯಲ್ಲಿ ನೀಡಲಾಗಿದೆ. ಬಾಂಗ್ಲಾದೇಶದಿಂದ ಬಂದಿರುವ ವಲಸಿಗರ ಪೈಕಿ ಶೇ 54.8ರಷ್ಟು ಕುಟುಂಬಗಳು ನೆರವನ್ನು ಪಡೆಯುತ್ತಿವೆ.
ಪಾಕಿಸ್ತಾನ(ಶೇ 40.2), ನೇಪಾಳ(ಶೇ34.8), ಚೀನಾ(ಶೇ32.9) ಹಾಗೂ ಇಸ್ರೇಲ್/ಪ್ಯಾಲೆಸ್ಟೀನ್‌ನ ಶೇ 25.9ರಷ್ಟು ಕುಟುಂಬಗಳು ನೆರವು ಪಡೆಯುತ್ತಿವೆ ಎಂದು ಪಟ್ಟಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.