ವಾಷಿಂಗ್ಟನ್: ಚೀನಾ ಮೂಲದ ಸಾಮಾಜಿಕ ಮಾಧ್ಯಮ ಆ್ಯಪ್ ಟಿಕ್‌ಟಾಕ್‌ನ ಅಮೆರಿಕ ಶಾಖೆಯನ್ನು ಖರೀದಿಸಲು ಒರಾಕಲ್ ಕಂಪನಿ ಸಶಕ್ತವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟಿಕ್‌ಟಾಕ್‌ನ ಶಾಖೆಯನ್ನು 90 ದಿನಗಳ ಒಳಗಾಗಿ ಮಾರಾಟ ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಅಲ್ಲದೇ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಟಿಕ್‌ಟಾಕ್‌ನ ಕಾರ್ಯಾಚರಣೆಯನ್ನು ವಿಸ್ತರಿಸುವ ಸಂಬಂಧ ಆ್ಯಪ್‌ನ ಮಾತೃಸಂಸ್ಥೆ ಬೈಟ್‌ಡಾನ್ಸ್‌ನಲ್ಲಿ ಒರಾಕಲ್ ಹೂಡಿಕೆ ಮಾಡಿದೆ. ಈ ಕಾರಣದಿಂದಲೂ ಟ್ರಂಪ್ ಹೇಳಿಕೆಗೆ ಮಹತ್ವ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.