ADVERTISEMENT

ಇಸ್ರೇಲ್‌ ಮಾದರಿಯಂತೆ ‘ಐರನ್‌ ಡೋಮ್‌’ ರೂಪಿಸಲು ಸಿದ್ಧತೆ: ಟ್ರಂಪ್

ಏಜೆನ್ಸೀಸ್
Published 28 ಜನವರಿ 2025, 13:50 IST
Last Updated 28 ಜನವರಿ 2025, 13:50 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ಮಿಯಾಮಿ: ಗಡಿಯಾಚೆಯಿಂದ ತನ್ನ ಮೇಲೆ ಯಾವುದೇ ರೀತಿಯ ಕ್ಷಿಪಣಿ ದಾಳಿ ನಡೆಯುವುದನ್ನು ತಡೆಯಲು ಇಸ್ರೇಲ್‌ ಹೊಂದಿರುವ ವಾಯುದಾಳಿ ತಡೆ ವ್ಯವಸ್ಥೆ, ‘ಐರನ್‌ ಡೋಮ್‌’ನಂತಹದ್ದೇ ರಕ್ಷಣಾ ವ್ಯವಸ್ಥೆಯನ್ನು ರೂಪಿಸಲು ಅಮೆರಿಕ ಮುಂದಾಗಿದೆ.

ADVERTISEMENT

ಈ ಸಂಬಂಧ ಕಾರ್ಯಕಾರಿ ಆದೇಶಕ್ಕೆ ಸಹಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಹೇಳಿದ್ದಾರೆ. ‘ಅಮೆರಿಕವನ್ನು ಸಂರಕ್ಷಿಸುವ ಈ ವ್ಯವಸ್ಥೆಯನ್ನು ಕೂಡಲೇ ರೂಪಿಸಲಾಗುವುದು’ ಎಂದಿದ್ದಾರೆ. ‘ಐರನ್‌ ಡೋಮ್‌’ ರೂಪಿಸುವ ಕುರಿತು ಅವರು ತಮ್ಮ ಚುನಾವಣಾ ಪ್ರಚಾರದ ವೇಳೆಯೂ ಹಲವು ಬಾರಿ ಪ್ರಸ್ತಾಪಿಸಿದ್ದರು.

ಇಸ್ರೇಲ್‌ನ ‘ಐರನ್‌ ಡೋಮ್‌’ ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳನ್ನು ಮಾತ್ರವೇ ತಡೆಯಬಲ್ಲದು. ಖಂಡಾಂತರ ಕ್ಷಿಪಣಿಗಳನ್ನು ತಡೆಯುವ ಕ್ಷಮತೆ ಈ ಡೋಮ್‌ಗೆ ಇಲ್ಲ. ಅಮೆರಿಕಕ್ಕೆ ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳಿಗಿಂತ ಖಂಡಾಂತರ ಕ್ಷಿಪಣಿಗಳ ಬೆದರಿಕೆಯೇ ಹೆಚ್ಚಿದೆ. ಈ ವಿಚಾರವನ್ನು ಟ್ರಂಪ್‌ ನಿರ್ಲಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.