ADVERTISEMENT

ಬಾಂಬ್‌ ರವಾನೆ: ಟ್ರಂಪ್‌ ಬೆಂಬಲಿಗನಿಗೆ 20 ವರ್ಷ ಶಿಕ್ಷೆ

ಏಜೆನ್ಸೀಸ್
Published 6 ಆಗಸ್ಟ್ 2019, 20:12 IST
Last Updated 6 ಆಗಸ್ಟ್ 2019, 20:12 IST
   

ನ್ಯೂಯಾರ್ಕ್‌:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅವರ ಮನೆಗೆಸ್ಫೋಟಕ ವಸ್ತುಕಳುಹಿಸಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗನಿಗೆ ಸೋಮವಾರ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸೀಸರ್‌ ಸಯೋಕ್‌ (57) ಬಂಧಿತ ಆರೋಪಿ. ಫ್ಲೋರಿಡಾ ಅಂಚೆ ಇಲಾಖೆಯಿಂದ ಸಿಎನ್‌ಎನ್‌ ಕಚೇರಿ ಸೇರಿದಂತೆ ಡೆಮಾಕ್ರೆಟಿಕ್‌ ಪಕ್ಷದ ಮುಖಂಡರ ಮನೆಗಳಿಗೆ 16 ಪ್ರತ್ಯೇಕ ಕಚ್ಚಾ ಬಾಂಬ್‌ ಪ್ಯಾಕೇಜ್‌ಗಳನ್ನು ಕಳುಹಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ 65 ಪ್ರಕರಣಗಳು ದಾಖಲಾಗಿತ್ತು.

ಒಬಾಮ ಮತ್ತು ಕ್ಲಿಂಟನ್ ಮಾತ್ರವಲ್ಲದೇ,ಕೋಟ್ಯಧಿಪತಿ ಜಾರ್ಜ್ ಸೊರೊಸ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಮಾಜಿ ಉಪಾಧ್ಯಕ್ಷ ಜೋ ಬಿಡನ್ ಮತ್ತು ನಟ ರಾಬರ್ಟ್ ಡಿ ನಿರೋ, ಕಮಲಾ ಹ್ಯಾರೀಸ್‌ ಸೇರಿದಂತೆ ಡೆಮಾಕ್ರೆಟಿಕ್‌ ಪಕ್ಷದ ಹಲವು ವಕೀಲರನ್ನು ಗುರಿಯಾಗಿಸಿಕೊಂಡು ಕಚ್ಚಾ ಬಾಂಬ್‌ ರವಾನಿಸಲಾಗಿತ್ತು.

ADVERTISEMENT

‘ಈ ಪ್ರಕರಣದಲ್ಲಿ ಅಪರಾಧಗಳ ಸ್ವರೂಪ ಮತ್ತು ಸನ್ನಿವೇಶಗಳು ಭಯಾನಕವಾಗಿವೆ’ ಎಂದು ಜಿಲ್ಲಾ ನ್ಯಾಯಾಧೀಶ ಜೆಡ್ ರಾಕೋಫ್ ಅವರು ಅಭಿಪ್ರಾಯಪಟ್ಟರು.

ಯಾವುದೇ ಬಾಂಬ್‌ ಸ್ಫೋಟಗೊಂಡಿರಲಿಲ್ಲ.ಆದರೆ,2018ರ ನವೆಂಬರ್‌ನಲ್ಲಿ ನಡೆದ ಅಮೆರಿಕದ ಮಧ್ಯಂತರ ಚುನಾವಣೆ ವೇಳೆ ರಾಜಕೀಯ ಉದ್ವಿಗ್ನತೆ ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.