ವಾಷಿಂಗ್ಟನ್: 2019ರ ಬೆಂಕಿ ಅವಘಡದಲ್ಲಿ ಹಾನಿಗೊಂಡಿದ್ದ ಪ್ಯಾರಿಸ್‌ನ ನೊಟ್ರೆ-ಡ್ಯಾಮ್ ಡಿ ಕ್ಯಾಥೆಡ್ರಲ್‌ನ ಮರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಡಿಸೆಂಬರ್ 7ರಂದು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ.
ಫ್ರೆಂಚ್‌ನ ಗೋಥಿಕ್ ವಾಸ್ತುಶೈಲಿಯಲ್ಲಿ 13ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದ ಈ ಕ್ಯಾಥೆಡ್ರಲ್ 2019ರ ಏಪ್ರಿಲ್ 15ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ನಾಶಗೊಂಡಿತ್ತು. ಐದು ವರ್ಷಗಳಲ್ಲಿ ಐತಿಹಾಸಿಕ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಟ್ರೂಥ್‘ನಲ್ಲಿ ಮಾಹಿತಿ ನೀಡಿರುವ ಟ್ರಂಪ್,‘ ಶನಿವಾರ ನಾನು ಪ್ಯಾರಿಸ್‌ಗೆ ಭೇಟಿ ನೀಡುತ್ತಿದ್ದು, ಐತಿಹಾಸಿಕ ನೊಟ್ರೆ-ಡ್ಯಾಮ್ ಡಿ ಕ್ಯಾಥೆಡ್ರಲ್‌ನ ಮರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ. ಐದು ವರ್ಷಗಳ ಹಿಂದೆ ನಾಶವಾಗಿದ್ದ ಕ್ಯಾಥೆಡ್ರಲ್ ಅನ್ನು ಪುನರ್ ನಿರ್ಮಿಸಲಾಗಿದೆ. ಪೂರ್ಣಮಟ್ಟದ ವೈಭವವನ್ನು ಮರುಸ್ಥಾಪಿಸುವಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರನ್ ಅವರು ಅದ್ಭುತ ಕೆಲಸ ಮಾಡಿದ್ದಾರೆ’ ಎಂದು ಬಣ್ಣಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶ್ವದ 170ಕ್ಕೂ ಅಧಿಕ ಬಿಷಪ್‌ಗಳು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.