ವಾಷಿಂಗ್ಟನ್ (ಪಿಟಿಐ): ದೇಶ ಮುನ್ನಡೆಸಲು ಡೊನಾಲ್ಡ್ ಟ್ರಂಪ್ ಅಸಮರ್ಥ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೂ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
‘ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಸೇನಾ ಮುಖ್ಯಸ್ಥರಾಗಿದ್ದ ಜಾನ್ ಕೆಲ್ಲಿ ಮಂಗಳವಾರ ಹೇಳಿದ್ದಂತೆ, ಟ್ರಂಪ್ ಅವರಿಗೆ ಅಡಾಲ್ಫ್ ಹಿಟ್ಲರ್ ಬಳಿ ಇದ್ದಂತಹ ಸೇನಾ ಅಧಿಕಾರಿಗಳು ಬೇಕಿದ್ದರು. ಅಮೆರಿಕ ಸಂವಿಧಾನಕ್ಕೆ ಬದ್ಧವಾಗಿರುವಂತಹ ಸೇನೆ ಅವರಿಗೆ ಬೇಕಿರಲಿಲ್ಲ; ತಮಗೆ ನಿಷ್ಠವಾಗಿ ಇರುವಂತಹ ಸೇನೆ ಬೇಕಿತ್ತು’ ಎಂದು ಕಮಲಾ ಟೀಕಿಸಿದ್ದಾರೆ.
ತಮ್ಮವರೇ ಆದ ಅಮೆರಿಕನ್ನರನ್ನು ಒಳಗಿನ ಶತ್ರುಗಳು ಎಂದು ಕಳೆದೊಂದು ವಾರದಲ್ಲಿ ಟ್ರಂಪ್ ಪದೇಪದೆ ಕರೆದಿದ್ದಾರೆ. ಅಮೆರಿಕ ಪ್ರಜೆಗಳ ಮೇಲೆ ಎರಗಲು ಸೇನೆಯನ್ನು ಬಳಸುವುದಾಗಿಯೂ ಹೇಳಿದ್ದಾರೆ. ಅವರೊಬ್ಬ ಸರ್ವಾಧಿಕಾರಿ ಹಾಗೂ ಅಂತಹ ಮನಃಸ್ಥಿತಿಯವರನ್ನೇ ಬೆಂಬಲಿಸುತ್ತಾರೆ ಎನ್ನುವುದಕ್ಕೆ ಈ ಮಾತುಗಳು ಪುಷ್ಟಿ ನೀಡುತ್ತವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.