ಡೊನಾಲ್ಡ್ ಟ್ರಂಪ್
ಕೆರ್ವಿಲ್ಲೆ (ಟೆಕ್ಸಾಸ್): ಪ್ರವಾಹಪೀಡಿತ ಟೆಕ್ಸಾಸ್ ನಗರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಭೇಟಿ ನೀಡಿ, ಹಾನಿಯನ್ನು ಪರಿಶೀಲಿಸಿದರು.
ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಹಾನಿಗೆ ಕಾರಣ ಎಂಬ ಟೀಕೆ ವ್ಯಕ್ತವಾಗುತ್ತಿದ್ದರೂ, ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಅಧಿಕಾರಿಗಳು ಮತ್ತು ನೆರವಿಗೆ ಧಾವಿಸಿದರನ್ನು ಟ್ರಂಪ್ ಶ್ಲಾಘಿಸಿದರು.
‘ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ. ಅವರ ಪತ್ತೆಗಾಗಿ ಅವಿರತವಾಗಿ ಶ್ರಮ ಪಡುತ್ತಿದ್ದಾರೆ. ಇವರಿಗಿಂತ ಉತ್ತಮರು ನಿಮಗೆ ಸಿಗಲಾರರು. ಯಾರೂ ಸಹ ಮಾಡಲಾಗದ ರೀತಿಯಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಶಂಸಿಸಿದರು.
ಜುಲೈ 4ರಿಂದ ಉಂಟಾದ ಪ್ರವಾಹದಲ್ಲಿ ಕನಿಷ್ಠ 129 ಮಂದಿ ಮೃತಪಟ್ಟಿದ್ದಾರೆ ಮತ್ತು 170ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.