ADVERTISEMENT

ಡೊನಾಲ್ಡ್‌ ಟ್ರಂಪ್‌ ಅವರದ್ದು ಇಬ್ಬಗೆಯ ನೀತಿ: ಪ್ರತಿಭಟನಾಕಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:46 IST
Last Updated 10 ಜೂನ್ 2025, 15:46 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ವಾಷಿಂಗ್ಟನ್‌: ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ವಿರೋಧಿಸಿ ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಅವರು ಉಗಿದರೆ, ನಾವು ಹೊಡೆಯುತ್ತೇವೆ. ಅವರು ಹಿಂದೆಂದೂ ಕಾಣದಂತಹ ತಿರುಗೇಟು ನೀಡುತ್ತೇವೆ. ಅಗೌರವವನ್ನು ನಾವು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಟ್ರಂಪ್ ನೀಡಿರುವ ಸಂದೇಶವನ್ನು ಹಲವರು ಟೀಕಿಸಿದ್ದು, ‘2021 ಜನವರಿ 21ರಂದು ‘ದಿ ಕ್ಯಾಪಿಟೋಲ್‌’ ಮೇಲೆ ದಾಳಿ ಮಾಡಿದವರನ್ನು ಕ್ಷಮಿಸಿರುವ ಟ್ರಂಪ್, ಇದೀಗ ದಂಗೆ ಎದ್ದಿರುವವರ ವಿರುದ್ಧ ಕಟುವಾಗಿ ನಡೆದುಕೊಳ್ಳುವ ಮೂಲಕ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.‌

ADVERTISEMENT

‘ಕಾನೂನು ಮತ್ತು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರನ್ನು ಮಾತ್ರ ಗೌರವಿಸಲಾಗುತ್ತದೆ ಎಂಬುದು ಟ್ರಂಪ್ ನಡವಳಿಕೆಯಿಂದ ಸ್ಪಷ್ಟವಾಗಿದೆ’ ಎಂದು ರಾಜಕೀಯ ವಿಜ್ಞಾನಿ ಬ್ರೆಂಡನ್‌ ನಿಹಾನ್‌ ಅವರು ಹೇಳಿದ್ದಾರೆ.

ಟ್ರಂಪ್ ಪರ ಪ್ರತಿಕ್ರಿಯೆ ನೀಡಿದ ಶ್ವೇತಭವನದ ವಕ್ತಾರ ಹ್ಯಾರಿಸನ್‌ ಫೀಲ್ಡ್ಸ್ ಅವರು ‘ಗಡಿ ರಕ್ಷಣೆ, ಕಾನೂನು ಸುವ್ಯವಸ್ಥೆಯ ಪುನರ್‌ಸ್ಥಾಪನೆಗಾಗಿ ಟ್ರಂಪ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ದಿ ಕ್ಯಾಪಿಟೋಲ್‌ ಬಳಿ ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸರ ಮೇಲೆಯೂ ದಾಳಿ ನಡೆಸಿ, ಗಾಯಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದ 1000ಕ್ಕೂ ಅಧಿಕ ಜನರಿಗೆ ಟ್ರಂಪ್ ಕ್ಷಮಾದಾನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.