ADVERTISEMENT

ಸಿರಿಯಾದಲ್ಲಿ ಟರ್ಕಿ ಸೇನಾ ಕಾರ್ಯಾಚರಣೆ ಮುಂದುವರಿಕೆ

ಕದನವಿರಾಮಕ್ಕೆ ಅಮೆರಿಕ ಒತ್ತಾಯ

ಏಜೆನ್ಸೀಸ್
Published 16 ಅಕ್ಟೋಬರ್ 2019, 19:56 IST
Last Updated 16 ಅಕ್ಟೋಬರ್ 2019, 19:56 IST
ಟರ್ಕಿ ಪಡೆಗಳು ನಡೆಸಿದ ಷೆಲ್‌ ದಾಳಿಯ ಪರಿಣಾಮ ರಾಸ್‌ ಅಲ್‌ ಐನ್‌ ಪಟ್ಟಣದಲ್ಲಿ ಎದ್ದಿರುವ ಹೊಗೆ –ರಾಯಿಟರ್ಸ್‌ ಚಿತ್ರ
ಟರ್ಕಿ ಪಡೆಗಳು ನಡೆಸಿದ ಷೆಲ್‌ ದಾಳಿಯ ಪರಿಣಾಮ ರಾಸ್‌ ಅಲ್‌ ಐನ್‌ ಪಟ್ಟಣದಲ್ಲಿ ಎದ್ದಿರುವ ಹೊಗೆ –ರಾಯಿಟರ್ಸ್‌ ಚಿತ್ರ   

ಸಿಲನ್‌ಪಿನಾರ್‌,ಟರ್ಕಿ: ಸಿರಿಯಾ ಗಡಿಯಲ್ಲಿ ಕುರ್ದಿಶ್‌ ಬಂಡುಕೋರರ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತೀವ್ರವಾಗಿದ್ದರೂ ಟರ್ಕಿ ದಾಳಿ ಮುಂದುವರಿಸಿದೆ.

ಕದನವಿರಾಮ ಘೋಷಿಸುವಂತೆ ಒತ್ತಾಯಿಸಲು ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅಂಕಾರ ತಲುಪಿದ್ದಾರೆ.

ಸಿರಿಯಾದ ಗಡಿಭಾಗದಲ್ಲಿರುವ ರಾಸ್‌ ಅಲ್‌ ಐನ್‌ ಪಟ್ಟಣದಲ್ಲಿ ಕುರ್ದಿಶ್‌ ಬಂಡುಕೋರರು ಮತ್ತು ಟರ್ಕಿ ಬೆಂಬಲಿತ ಪಡೆಗಳ ನಡುವೆ ಬುಧವಾರ ಮತ್ತೆ ಕಾಳಗ ನಡೆದಿದೆ.

ADVERTISEMENT

ಟರ್ಕಿಯ ನಡೆ ಪ್ರಮುಖ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೂ ಕಾರಣವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸರ್ಕಾರದ ಕಾರ್ಯದರ್ಶಿ ಮೈಕ್‌ ಪೋಂಪಿಯೊ ಅವರನ್ನೂ ಪೆನ್ಸ್‌ ಜೊತೆಗೆ ಟರ್ಕಿಗೆ ಕಳುಹಿಸಿದ್ದಾರೆ. ನ್ಯಾಟೊ ಮಿತ್ರರಾಷ್ಟ್ರಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.