ಇಸ್ತಾಂಬುಲ್: ಟರ್ಕಿಯ ವಾಯವ್ಯ ಪ್ರಾಂತ್ಯ ಬಲಿಕೆಸಿರ್‌ನಲ್ಲಿ ಭಾನುವಾರ 6.1 ತೀವ್ರತೆಯ ಭೂಕಂಪನವಾಗಿದೆ. 10ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿವೆ. ಅವಶೇಷಗಳಡಿ ಕನಿಷ್ಠ ಇಬ್ಬರು ಸಿಲುಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಂದಿರ್ಗಿ ಪಟ್ಟಣದಲ್ಲಿ ಕಂಪನ ಕೇಂದ್ರ ಕಂಡುಬಂದಿದ್ದು, 200 ಕಿ.ಮೀ. ದೂರದ ಇಸ್ತಾಂಬುಲ್‌ನಲ್ಲಿ ಕಂಪನದ ಅನುಭವವಾಗಿದೆ.
ಇದರ ಬೆನ್ನಲ್ಲೇ ಹಲವೆಡೆ ಕೂಡ ಭೂಮಿ ಕಂಪಿಸಿದ್ದು, ಒಂದು ಕಡೆ 4.6ರಷ್ಟು ತೀವ್ರತೆ ದಾಖಲಾಗಿದೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.