ADVERTISEMENT

ಟರ್ಕಿ ಹಿಮಪಾತ: ಸಾವಿನ ಸಂಖ್ಯೆ 39ಕ್ಕೆ ಏರಿಕೆ

ಪಿಟಿಐ
Published 6 ಫೆಬ್ರುವರಿ 2020, 17:03 IST
Last Updated 6 ಫೆಬ್ರುವರಿ 2020, 17:03 IST
ಟರ್ಕಿಯ ವ್ಯಾನ್‌ ಪ್ರಾಂತ್ಯದಲ್ಲಿ ಹಿಮಪಾತದಲ್ಲಿ ಸಿಲುಕಿದವರನ್ನು ರಕ್ಷಿಸಲು ಯೋಧರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದರು –ರಾಯಿಟರ್ಸ್ ಚಿತ್ರ
ಟರ್ಕಿಯ ವ್ಯಾನ್‌ ಪ್ರಾಂತ್ಯದಲ್ಲಿ ಹಿಮಪಾತದಲ್ಲಿ ಸಿಲುಕಿದವರನ್ನು ರಕ್ಷಿಸಲು ಯೋಧರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದರು –ರಾಯಿಟರ್ಸ್ ಚಿತ್ರ   

ಇಸ್ತಾಂಬುಲ್: ‘ಟರ್ಕಿಯ ಪೂರ್ವಭಾಗದಲ್ಲಿ ಎರಡು ಬಾರಿ ಹಿಮಪಾತ ಉಂಟಾಗಿದ್ದು, ಮೃತರ ಸಂಖ್ಯೆ ಗುರುವಾರ 39ಕ್ಕೆ ಏರಿದೆ’ ಎಂದು ಟರ್ಕಿಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಮಂಗಳವಾರ ತಡರಾತ್ರಿ ಸಂಭವಿಸಿದ ಮೊದಲ ಹಿಮಪಾತದಲ್ಲಿ ಐವರು ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದರು. ತುರ್ತು ಸೇವಾಪಡೆಯ ಸುಮಾರು 300 ಸಿಬ್ಬಂದಿ ವ್ಯಾನ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿರುವವರನ್ನು ಹುಡುಕಲು ಕಾರ್ಯಾಚರಣೆ ನಡೆಸುತ್ತಿದ್ದರು.

‘ಬುಧವಾರ ಎರಡನೇ ಬಾರಿಗೆ ಹಿಮಪಾತ ಸಂಭವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಇದರಡಿಯಲ್ಲಿ ಹೂತುಹೋಗಿತ್ತು. ರಕ್ಷಣಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ 33 ಜನರ ದೇಹಗಳನ್ನು ಹೊರತೆಗೆಯಲಾಗಿದೆ’ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆ ಎಎಫ್‌ಎಡಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.