ADVERTISEMENT

ಟರ್ಕಿ | ಐಎಸ್‌ ವಿರುದ್ಧ ಕಾರ್ಯಾಚರಣೆ: 110 ಶಂಕಿತ ಉಗ್ರರು ವಶಕ್ಕೆ

ಏಜೆನ್ಸೀಸ್
Published 30 ಡಿಸೆಂಬರ್ 2025, 14:34 IST
Last Updated 30 ಡಿಸೆಂಬರ್ 2025, 14:34 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಅಂಕಾರಾ: ಟರ್ಕಿ ಸರ್ಕಾರವು ಕಳೆದ ಒಂದು ವಾರದಿಂದ ಐಎಸ್‌ ಉಗ್ರ ಸಂಘಟನೆ ಸದಸ್ಯರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆ ನಡೆಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 114 ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, 110 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರದ ನಡೆಸಿದ್ದ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದು, ಮೂವರು ಪೊಲೀಸರು ಹುತಾತ್ಮರಾಗಿದ್ದರು ಮತ್ತು ಆರು ಉಗ್ರರು ಮೃತಪಟ್ಟಿದ್ದರು. ಎಂಟು ಪೊಲೀಸರಿಗೆ ಗಾಯವಾಗಿತ್ತು. ‘ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಮುಸ್ಲಿಮೇತರರ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಯು ಸಂಚು ನಡೆಸಿದೆ’ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ADVERTISEMENT

‘ವಶಕ್ಕೆ ಪಡೆದ ಶಂಕಿತರಲ್ಲಿ ಸೋಮವಾರಷ್ಟೇ ಪೊಲೀಸರ ಮೇಲೆ ಗುಂಡು ಹಾರಿಸಿದವರೂ ಸೇರಿದ್ದಾರೆ. ಜೊತೆಗೆ, ಸಂಘಟನೆಗಾಗಿ ಹಣ ಸಂಗ್ರಹ ಮಾಡುವವರು, ಹೊಸ ವರ್ಷಾಚರಣೆ ವೇಳೆ ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದವರೂ ಸೇರಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.