ADVERTISEMENT

ನೇಪಾಳದಲ್ಲಿ ಭೂ ಕುಸಿತ: ಇಬ್ಬರು ಭಾರತೀಯರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 12:54 IST
Last Updated 20 ಜೂನ್ 2022, 12:54 IST
   

ಕಠ್ಮಂಡು (ಪಿಟಿಐ): ನೇಪಾಳದ ಕಪಿಲವಸ್ತು ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ಯಾತ್ರಿಕರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದ ಭಾರತದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ನಿಖಿಲ್ ಕೌಶಲ್ (17) ಮತ್ತು ಸೂರಜ್ ಸೋನಿ (18) ಅವರು ಶಿವರಾಜ್ ಪುರಸಭೆ-1 ಪ್ರದೇಶದಲ್ಲಿ ಸ್ಥಳೀಯ ಹೊಳೆ ದಾಟಲು ಪ್ರಯತ್ನಿಸಿದಾಗ ಕೊಚ್ಚಿಕೊಂಡು ಹೋಗಿದ್ದಾರೆ. ಯಾತ್ರಾರ್ಥಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯುವಕರಿಬ್ಬರು ವಾಹನದಿಂದ ಹೊರ ಬಂದಾಗ ಭೂ ಕುಸಿತ ಸಂಭವಿಸಿದೆ. ಅದರಲ್ಲಿ ಸುಮಾರು 16 ಭಾರತೀಯ ಯಾತ್ರಿಕರು ಇದ್ದರು. ಅಲ್ಲದೆ,ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರ ಸ್ವರ್ಗದ್ವಾರಿಯಿಂದ ಹಿಂದಿರುಗುತ್ತಿದ್ದ ಇತರೆ ಭಾರತೀಯ ಯಾತ್ರಾರ್ಥಿಗಳ ವಾಹನವು ಸ್ಥಳೀಯ ಹೊಳೆಯಲ್ಲಿ ಸಿಲುಕಿಕೊಂಡರೂ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.