ADVERTISEMENT

ಅನಧಿಕೃತವಾಗಿ ಭಾರತದ ಗಡಿ ಪ್ರವೇಶಿಸಿದ್ದ ಶ್ರೀಲಂಕಾದ ಇಬ್ಬರ ಬಂಧನ

ಪಿಟಿಐ
Published 28 ಏಪ್ರಿಲ್ 2022, 11:39 IST
Last Updated 28 ಏಪ್ರಿಲ್ 2022, 11:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮೇಶ್ವರಂ: ಅನಧಿಕೃತವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದ ಶ್ರೀಲಂಕಾದ ಇಬ್ಬರು ನಾಗರಿಕರನ್ನು ಬಂಧನ ಮಾಡಲಾಗಿದೆ.

ರಾಮೇಶ್ವರಂ ಜಿಲ್ಲೆಯ ದೇವಿಪಟ್ಟಣಂ ಮರೈನ್ ಪೊಲೀಸರು ಶ್ರೀಲಂಕಾದ ನಾಗರಿಕರನ್ನು ಬಂಧಿಸಿದ್ದಾರೆ.

ಬಂಧನಕ್ಕೊಳಗಾದ ಈ ಇಬ್ಬರ ಮೇಲೆ ಶ್ರೀಲಂಕಾದಲ್ಲಿ ಡ್ರಗ್ಸ್ ಸಾಗಾಣೆ ಹಾಗೂ ಮಾರಾಟದ ಆರೋಪ ಇದೆ. ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಉದ್ಭವಿಸಿರುವುದರಿಂದ ಅಲ್ಲಿನ ಕೆಲ ನಾಗರಿಕರು ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT

ಇನ್ನೊಂದೆಡೆ ಇಂದು ಶ್ರೀಲಂಕಾದಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಹಾಗೂ ಸಾವಿರಾರು ಕಾರ್ಮಿಕರು ಬೀದಿಗಿಳಿದು ಶ್ರೀಲಂಕಾದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಂದ್ ಕೂಡ ಆಚರಿಸಿದ್ದಾರೆ. ಪ್ರಧಾನಿ ಮಹಿಂದಾ ರಾಜಪಕ್ಸಅವರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.