ದುಬೈ: ನಿರ್ದಿಷ್ಟ ರಾಷ್ಟ್ರಗಳ ಪ್ರಜೆಗಳಿಗೆ ಜೀವಮಾನ ಗೋಲ್ಡನ್ ವೀಸಾ ನೀಡಲಿದೆ ಎಂಬ ಮಾಧ್ಯಮಗಳಲ್ಲಿನ ವರದಿಗಳನ್ನು ಯುಎಇ ಸರ್ಕಾರ ತಳ್ಳಿಹಾಕಿದೆ.
‘ಗೋಲ್ಡನ್ ವೀಸಾ ವಿತರಣೆಗೆ ಸಂಬಂಧಿಸಿ ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆಗೆ ಯುಎಇ ಅಧಿಕಾರಿಗಳು ಚಾಲನೆ ನೀಡಿದ್ದಾರೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಇಂತಹ ಯಾವ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಈ ಪ್ರಕ್ರಿಯೆ ಮೂಲಕ ಗೋಲ್ಡನ್ ವೀಸಾ ಪಡೆಯಬಹುದು ಎಂದು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಯುಎಇ ಫೆಡರಲ್ ಪೌರತ್ವ, ಕಸ್ಟಮ್ಸ್ ಮತ್ತು ಬಂದರು ಭದ್ರತಾ ಪ್ರಾಧಿಕಾರ (ಐಸಿಪಿ) ತಿಳಿಸಿದೆ.
ಗೋಲ್ಡನ್ ವೀಸಾ ಪಡೆಯಲು ಕೆಲವು ನಿಬಂಧನೆ, ಷರತ್ತು ಮತ್ತು ಕಾನೂನುಗಳಿದ್ದು, ಈ ಕುರಿತ ಎಲ್ಲ ಅರ್ಜಿಗಳನ್ನು ಸರ್ಕಾರವೇ ನಿರ್ವಹಿಸುತ್ತದೆ. ಅದಕ್ಕಾಗಿ ಯಾವುದೇ ಮಧ್ಯವರ್ತಿಗಳು ಇಲ್ಲ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.