ADVERTISEMENT

ಕೊರೊನಾ ಮೂಲ ತಳಿ, ಓಮೈಕ್ರಾನ್ ವಿರುದ್ಧ ರಕ್ಷಣೆ ಒದಗಿಸುವ ಲಸಿಕೆಗೆ ಬ್ರಿಟನ್ ಅಸ್ತು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 13:41 IST
Last Updated 15 ಆಗಸ್ಟ್ 2022, 13:41 IST
   

ಲಂಡನ್: ಕೊರೊನಾದಮೂಲ ಮತ್ತು ಓಮೈಕ್ರಾನ್ ರೂಪಾಂತರ ತಳಿಯಿಂದ ರಕ್ಷಣೆ ಒದಗಿಸುವ ದ್ವಿಗುಣ ಒಳಗೊಂಡಿರುವ ಲಸಿಕೆಗೆ ಮುನ್ನೆಚ್ಚರಿಕೆ ಡೋಸ್‌ಗಾಗಿ ಅನುಮೋದನೆ ನೀಡಲಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಡೆರ್ನಾ ಕಂಪನಿಯ ಲಸಿಕೆಯು ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವದ ಮಾನದಂಡಗಳನ್ನು ಪೂರೈಸಿದ್ದು, ಕೊರೊನಾ ವೈರಸ್ ವಿರುದ್ಧ ತೀಕ್ಷ್ಣ ಸಾಧನವಾಗಿದೆ ಎಂದು ಔಷಧಿ ಮತ್ತು ಆರೋಗ್ಯ ಕಾಳಜಿ ಉತ್ಪನ್ನಗಳ ನಿಯಂತ್ರಣ ಸಂಸ್ಥೆ(ಎಂಎಚ್‌ಆರ್‌ಎ) ಹೇಳಿದೆ.

‘Spikevax bivalent Original/Omicron’ಎಂದು ಕರೆಯಲಾಗುವ ಲಸಿಕೆಯ ಅರ್ಧ ಭಾಗವು(25 ಮೈಕ್ರೊ ಗ್ರಾಂ) 2020ರ ಮೂಲ ಕೊರೊನಾ ವೈರಸ್ ಸೋಂಕಿನ ವಿರುದ್ಧ ಮತ್ತು ಉಳಿದರ್ಧ ಭಾಗವು(25 ಮೈಕ್ರೊ ಗ್ರಾಂ) ಓಮೈಕ್ರಾನ್‌ನಿಂದ ರಕ್ಷಣೆ ಒದಗಿಸುತ್ತದೆ.

ADVERTISEMENT

‘ಕ್ಲಿನಿಕಲ್ ಪ್ರಯೋಗದಲ್ಲಿ ಓಮೈಕ್ರಾನ್ ಬಿಎ.1 ರೂಪಾಂತರ ಮತ್ತು 2020ರ ಮೂಲ ಕೊರೊನಾ ಸೋಂಕಿನ ವಿರುದ್ಧ ಬಲವಾದ ಪ್ರತಿರಕ್ಷಣೆಯನ್ನು ಒದಗಿಸುವಲ್ಲಿ ಸಫಲವಾಗಿರುವ ಮಾಡೆರ್ನಾ ಬೈವೆಲೆಂಟ್ ಬೂಸ್ಟರ್ ಲಸಿಕೆಯ ಅನುಮೋದನೆಯನ್ನು ಘೋಷಿಸಲು ನನಗೆ ಅತ್ಯಂತ ಸಂತೋಷವಾಗಿದೆ’ಎಂದು ಎಂಎಚ್‌ಆರ್‌ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಜೂನ್ ರೈನ್ ತಿಳಿಸದರು.

‘ಬ್ರಿಟನ್‌ನಲ್ಲಿ ಬಳಸಲಾಗುತ್ತಿರುವ ಮೊದಲ ತಲೆಮಾರಿನ ಕೋವಿಡ್-19 ಲಸಿಕೆಗಳು ರೋಗದ ವಿರುದ್ಧ ಪ್ರಮುಖ ರಕ್ಷಣೆ ನೀಡುವುದು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತವೆ. ಈ ದ್ವಿಗುಣ ಲಸಿಕೆಯು ವಿಕಸನಗೊಳ್ಳುತ್ತಲೇ ಇರುವ ವೈರಸ್‌ನಿಂದ ನಮ್ಮನ್ನು ರಕ್ಷಿಸುವ ತೀಕ್ಷ್ಣವಾದ ಸಾಧನವಾಗಿದೆ’ಎಂದು ಅವರು ಹೇಳಿದರು.

ಬೂಸ್ಟರ್ ಡೋಸ್‌ಗೆ ಮಾಡೆರ್ನಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡುವ ನಿರ್ಧಾರವನ್ನು ಸರ್ಕಾರದ ಸ್ವತಂತ್ರ ತಜ್ಞ ವೈಜ್ಞಾನಿಕ ಸಲಹಾ ಸಂಸ್ಥೆ ಮತ್ತು ಔಷಧಿಗಳ ಆಯೋಗವು ಪ್ರಯೋಗದ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಅನುಮೋದಮೆ ನೀಡಿದೆ ಎಂದು ಎಂಎಚ್‌ಆರ್‌ಎ ಹೇಳಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.