ಲಂಡನ್: ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಸಚಿವ ಸಂಪುಟ ಪುನಾರಚನೆಯನ್ನು ಶನಿವಾರ ಅಂತಿಮಗೊಳಿಸಿದರು. ಪರಿಣಾಮವಾಗಿ ಮಹತ್ವದ ಸ್ಥಾನಗಳಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಪಾಕಿಸ್ತಾನ ಮೂಲದ ಶಬಾನಾ ಮಹಮ್ಮದ್ ಅವರಿಗೆ ಗೃಹ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ ಮತ್ತು ಅವೆಟ್ ಕೂಪರ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಸರ್ಕಾರದ ಮಹತ್ವದ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಲಾಗಿದೆ.
‘ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನನಗೆ ಸಿಕ್ಕ ಅತಿ ದೊಡ್ಡ ಗೌರವ. ಸರ್ಕಾರದ ಮೊದಲ ಆದ್ಯತೆ ನಾಗರಿಕರ ಸುರಕ್ಷತೆ’ ಎಂದು ಹೇಳಿ ಶಬಾನಾ ಅವರು ಪ್ರಮಾಣವಚನ ಸ್ವೀಕರಿಸಿದರು.
‘ಯುರೋಪಿನಲ್ಲಿ ರಷ್ಯಾ ಆಕ್ರಮಣದಿಂದ ಹಿಡಿದು, ಗಾಜಾದಲ್ಲಿನ ಯುದ್ಧದವರೆಗೆ ಬ್ರಿಟನ್ ರಾಜತಾಂತ್ರಿಕತೆ ಅಷ್ಟೇನೂ ಮಹತ್ವ ಪಡೆದಿಲ್ಲ. ಬ್ರಿಟನ್‌ನ ಪ್ರತಿನಿಧಿಯಾಗಿ ನಾನು ದೇಶದ ಹಿತಾಸಕ್ತಿಯನ್ನು ಜಗತ್ತಿನ ಎದುರು ಮಂಡಿಸುತ್ತೇನೆ’ ಎಂದು ಕೂಪರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.