ADVERTISEMENT

ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಬ್ರಿಟನ್‌ ಕೋರ್ಟ್‌

ಪಿಟಿಐ
Published 6 ನವೆಂಬರ್ 2019, 20:25 IST
Last Updated 6 ನವೆಂಬರ್ 2019, 20:25 IST
ನೀರವ್‌ ಮೋದಿ
ನೀರವ್‌ ಮೋದಿ   

ಲಂಡನ್‌: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ಹೊಸದಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನವೆಸ್ಸ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬುಧವಾರ ತಿರಸ್ಕರಿಸಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚನೆ, ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿರುವ ನೀರವ್‌ ಅವರನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ.

ಜಾಮೀನಿಗಾಗಿ ಹೊಸ ಅರ್ಜಿ ಸಲ್ಲಿಸಿದ್ದ ನೀರವ್‌,‘₹ 18.28 ಕೋಟಿ ಬದಲಾಗಿ ₹ 36.57 ಕೋಟಿ ಮೊತ್ತದ ಭದ್ರತಾ ಠೇವಣಿ ನೀಡುವುದಾಗಿ ತಿಳಿಸಿದ್ದರು. ನ್ಯಾಯಾಧೀಶೆ ಎಮ್ಮಾ ಆರ್ಬಥ್ನಾಟ್‌ ಈ ಮನವಿಯನ್ನು ತಿರಸ್ಕರಿಸಿದರು.

ADVERTISEMENT

‘ನೀರವ್‌ ಖಿನ್ನತೆಯಿಂದ ಬಳಲುತ್ತಿದ್ದರೂ, ಜಾಮೀನು ನೀಡಬೇಕಾದಂತಹ ವಿಷಯವೇನಲ್ಲ’ ಎಂದು ಅಭಿಪ್ರಾಯಪಟ್ಟರು.

‘ನೀರವ್‌ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಇರುವ ವೈದ್ಯಕೀಯ ದಾಖಲೆಗಳು ಭಾರತದಲ್ಲಿರುವ ಮಾಧ್ಯಮಗಳಿಗೆ ಸೋರಿಕೆ ಆಗಿದ್ದು’ ಎಂದೂ ನ್ಯಾ. ಎಮ್ಮಾ ಪ್ರಶ್ನಿಸಿದರು.

‘ವೈದ್ಯಕೀಯ ದಾಖಲೆಗಳನ್ನು ಯಾರೂ ಭಾರತದ ಮಾಧ್ಯಮಗಳಿಗೆ ನೀಡಿಲ್ಲ. ಈ ಮಾಹಿತಿ ಸೋರಿಕೆಯಾಗಲು ಭಾರತದಲ್ಲಿರುವ ತನಿಖಾ ಸಂಸ್ಥೆಗಳೇ ಕಾರಣ’ ಎಂದು ನೀರವ್‌ ಪರ ವಕೀಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.