ಲಂಡನ್:ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಭಾರತೀಯ ಮೂಲದ ಅವರ ಪತ್ನಿಮರಿನಾ ವ್ಹೀಲರ್ ನಡುವಿನ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ.
ಬ್ರಿಟನ್‌ನಲ್ಲಿ 250 ವರ್ಷಗಳಲ್ಲಿ ಅಧಿಕಾರದಲ್ಲಿದ್ದಾಗಲೇ ವಿವಾಹ ವಿಚ್ಛೇದನ ಪಡೆದ ಪ್ರಥಮ ಪ್ರಧಾನಿ ಎನಿಸಿದ್ದಾರೆ.
ಬೋರಿಸ್ ಜಾನ್ಸನ್ ಅವರಿಗೆ ದ್ವಿತೀಯ ಪತ್ನಿ ಮರಿನಾ ವ್ಹೀಲರ್‌ರಿಂದ ನಾಲ್ವರು ಮಕ್ಕಳಿದ್ದಾರೆ. 2018ರಲ್ಲಿ ದಂಪತಿ ಪ್ರತ್ಯೇಕಗೊಂಡಿದ್ದರು. ವ್ಹೀಲರ್ ಅವರ ತಾಯಿ ಪಂಜಾಬ್ ಮೂಲದವರು.
55 ವರ್ಷದ ಜಾನ್ಸನ್ ಅವರು 32 ವರ್ಷದ ಕ್ಯಾರಿ ಸಿಮಂಡ್ಸ್ ಜತೆಗೆ 2019ರಿಂದಲೇ ಸಂಬಂಧ ಹೊಂದಿದ್ದರು. ಈಚೆಗೆ ಅವರಿಗೆ ಗಂಡು ಮಗು ಜನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.