ADVERTISEMENT

ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಲಿಜ್‌ ಟ್ರಸ್‌: ಆಕಾಂಕ್ಷಿಗಳ ಸಂಖ್ಯೆ 11ಕ್ಕೆ 

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 15:26 IST
Last Updated 11 ಜುಲೈ 2022, 15:26 IST
ಲಿಜ್‌ ಟ್ರಸ್‌
ಲಿಜ್‌ ಟ್ರಸ್‌   

ಲಂಡನ್: ಬೋರಿಸ್‌ ಜಾನ್ಸನ್‌ ರಾಜೀನಾಮೆಯಿಂದ ತೆರವಾಗಲಿರುವಬ್ರಿಟನ್ಪ್ರಧಾನಿ ಹುದ್ದೆ ಮತ್ತು ಕನ್ಸರ್ವೇಟಿವ್‌ ಪಕ್ಷದ ನಾಯಕತ್ವದ ಚುಕ್ಕಾಣಿಯ ಸ್ಪರ್ಧೆಯ ಆಕಾಂಕ್ಷಿಗಳ ಪಟ್ಟಿಗೆ ಸೋಮವಾರ ಮತ್ತೆರಡು ಹೆಸರು ಸೇರಿವೆ. ವಿದೇಶಾಂಗ ಸಚಿವೆ ಲಿಜ್‌ ಟ್ರಸ್‌ ಅವರೂ ಆಕಾಂಕ್ಷಿಯಾಗಿದ್ದು, ಅಭ್ಯರ್ಥಿಗಳ ಸಂಖ್ಯೆ 11ಕ್ಕೆ ತಲುಪಿದೆ.

ಭಾನುವಾರದವರೆಗೆ ಒಂಬತ್ತು ಆಕಾಂಕ್ಷಿಗಳ ಹೆಸರುಗಳಿದ್ದವು. ಮಾಜಿ ಆರೋಗ್ಯ ಸಚಿವ ಸಾಜಿದ್‌ ಜಾವಿದ್‌ ಜತೆಗೆ, ಮುಜಾಫರಾಬಾದ್‌ನಲ್ಲಿ ಜನಿಸಿದ ರೆಹಮಾನ್‌ ಚಿಸ್ತಿ ಕೂಡ ಆಕಾಂಕ್ಷಿಯಾಗಿದ್ದಾರೆ. ಪಾಕಿಸ್ತಾನ ಮೂಲದ ಇಬ್ಬರು ಪಟ್ಟಿಯಲ್ಲಿ ಕಾಣಿಸಿಕೊಂಡಂತಾಗಿದೆ.ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರ ಹೆಸರು ಸ್ಪರ್ಧೆಯ ಮುಂಚೂಣಿಯಲ್ಲಿದ್ದು, ಮತ್ತೊಬ್ಬ ಭಾರತೀಯ ಸಂಜಾತೆ ಗೋವಾದ ಸುವೆಲಾ ಬ್ರೇವರ್‌ಮನ್‌ ಕೂಡ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT