ADVERTISEMENT

ನಾನೂ ಜನಾಂಗೀಯ ಭೇದ ಅನುಭವಿಸಿದ್ದೇನೆ: ಸುನಕ್‌

ಪಿಟಿಐ
Published 4 ಫೆಬ್ರುವರಿ 2024, 13:29 IST
Last Updated 4 ಫೆಬ್ರುವರಿ 2024, 13:29 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ‘ನಾನು ಬಾಲ್ಯದಲ್ಲಿಯೇ ಜನಾಂಗೀಯ ಭೇದವನ್ನು ಅನುಭವಿಸಿದ್ದೇನೆ’ ಎಂದಿರುವ ಬ್ರಿಟನ್‌ನ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್‌ ಅವರು, ‘ನನ್ನ ಉಚ್ಛಾರಣೆ, ಹಾವಭಾವ ಸರಿ ಹೊಂದುವಂತೆ ಮಾಡಲು ಪೋಷಕರು ನನಗೆ ನಾಟಕದ ವಿಶೇಷ ತರಬೇತಿ ಕೊಡಸಿದರು’ ಎಂದು ಹೇಳಿದ್ದಾರೆ.

‘ಹೇಗೆ ಹೊಂದಿಕೊಳ್ಳಬೇಕು, ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಲು ನಾನು ಹೆಚ್ಚುವರಿ ತರಗತಿಗಳಿಗೆ ಹೋಗಬೇಕಾಯಿತು’ ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

‘ನನ್ನಂತೆ ನನ್ನ ಒಡಹುಟ್ಟಿದವರೂ ಜನಾಂಗೀಯ ಭೇದ ಅನುಭವಿಸಿದ್ದಾರೆ. ಇದು ಬಹಳ ನೋವುಂಟು ಮಾಡುತ್ತದೆ’ ಎಂದು ಅವರು ಬೇಸರದಿಂದ ಹೇಳಿದ್ದಾರೆ. ‘ನಾನು ಅನುಭವಿಸಿದ್ದನ್ನು ನನ್ನ ಮಕ್ಕಳು ಈಗ ಅನುಭವಿಸುತ್ತಿಲ್ಲ ಅನಿಸುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಯಾವುದೇ ರೀತಿಯ ಜನಾಂಗೀಯ ನೀತಿಯು ಸರಳವಾಗಿ ಸ್ವೀಕಾರಾರ್ಹವಲ್ಲ’ ಎಂದ ಅವರು, ತಾನು ಪ್ರಧಾನಿಯಾಗಬಹುದು ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.