ADVERTISEMENT

ಕೈಗಾರಿಕಾ ನಗರದಿಂದ ಉಕ್ರೇನ್‌ ಸೇನೆ ವಾಪಸ್‌?

ಏಜೆನ್ಸೀಸ್
Published 4 ಜೂನ್ 2022, 19:31 IST
Last Updated 4 ಜೂನ್ 2022, 19:31 IST
   

ಮಾಸ್ಕೊ/ ಕೀವ್‌: ಪೂರ್ವ ಉಕ್ರೇನ್‌ನ ಪ್ರಮುಖ ನಗರ ಸೆವೆರೊಡೊನೆಟ್‌ಸ್ಕ್‌ನಿಂದಉಕ್ರೇನ್‌ ಸೇನೆ ತನ್ನ ಕೆಲವು ಪಡೆಗಳನ್ನು ಹಿಂಪಡೆಯುತ್ತಿದೆ ಎಂದು ರಷ್ಯಾ ಸೇನೆ ಶನಿವಾರ ಹೇಳಿದೆ.

‘ಸೆವೆರೊಡೊನೆಟ್‌ಸ್ಕ್‌ ಮೇಲಿನ ನಿಯಂತ್ರಣಕ್ಕೆ ನಡೆಯುತ್ತಿರುವ ನಿರ್ಣಾ ಯಕ ಹೋರಾಟದಲ್ಲಿ ಉಕ್ರೇನ್‌ ಸೇನಾ ಪಡೆ ಭಾರಿ ನಷ್ಟ ಅನುಭವಿಸಿದ ನಂತರ, ಕೆಲವು ತುಕಡಿಗಳನ್ನು ಹಿಂಪಡೆದು, ಲೈಸಿಚಾನ್‌ಸ್ಕ್‌ ಕಡೆಗೆ ನಿಯೋಜಿಸುತ್ತಿದೆ’ ಎಂದು ಅದು ಹೇಳಿದೆ.

‘ಅಜೋಟ್ ಕಾರ್ಖಾನೆಯಲ್ಲಿ ನೈಟ್ರೇಟ್ ಮತ್ತು ನೈಟ್ರಿಕ್ ಆಮ್ಲದ ಟ್ಯಾಂಕ್‌ಗಳನ್ನು ಸ್ಫೋಟಕವಾಗಿ ಬಳಸಲು ಅವರ ಸೇನೆಗೆ ಅಧಿಕಾರಿಗಳು ಆದೇಶಿಸಿ, ಈ ಪ್ರದೇಶದಲ್ಲಿ ವಿಷಾನಿಲ ಹರಡುವ ಮೂಲಕ ನಮ್ಮ ಸೇನಾ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸಲು ಯತ್ನಿಸಿದರು’ ಎಂದು ರಷ್ಯಾ ಹೇಳಿದೆ.ಶನಿವಾರ ರಷ್ಯಾ ವಾಯುಪಡೆ ಉಕ್ರೇನ್‌ ಪೂರ್ವ ಪ್ರದೇಶದಲ್ಲಿ ದಾಳಿ ತೀವ್ರಗೊಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.