ADVERTISEMENT

USSR ನಂತರದ ಉಕ್ರೇನ್‌ನ ಮೊದಲ ಅಧ್ಯಕ್ಷ ಲಿಯೊನೆಡ್ ಕ್ರಾವ್‌ಚುಕ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 2:23 IST
Last Updated 11 ಮೇ 2022, 2:23 IST
ಲಿಯೊನೆಡ್ ಕ್ರಾವ್‌ಚುಕ್
ಲಿಯೊನೆಡ್ ಕ್ರಾವ್‌ಚುಕ್   

ಕೀವ್: ಸೋವಿಯತ್ ಯೂನಿಯನ್‌ನಿಂದ (USSR) ಉಕ್ರೇನ್ ಸ್ವಾತಂತ್ರ್ಯಗೊಂಡ ನಂತರ ಉಕ್ರೇನ್‌ನ ಮೊದಲ ಅಧ್ಯಕ್ಷರಾಗಿದ್ದ ಲಿಯೊನೆಡ್ ಕ್ರಾವ್‌ಚುಕ್ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

‘ಇದೊಂದು ಆಘಾತಕಾರಿ ಸುದ್ದಿ ಹಾಗೂ ಉಕ್ರೇನ್‌ಗೆ ತುಂಬಲಾರದ ನಷ್ಟ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರು ಹೇಳಿದ್ದಾರೆ.

ಮಾಜಿ ಕಮ್ಯೂನಿಸ್ಟ್ ನಾಯಕರಾಗಿದ್ದಲಿಯೊನೆಡ್ ಕ್ರಾವ್‌ಚುಕ್ ಅವರು ಸೋವಿಯತ್ ಯೂನಿಯನ್‌ನಿಂದ 1991 ರಲ್ಲಿ ಉಕ್ರೇನ್‌ ಬೇರ್ಪಡೆಯಾಗುವ ನೇತೃತ್ವ ವಹಿಸಿದ್ದರು. ಅದಕ್ಕಾಗಿ ಅವರೇ ಸಹಿ ಮಾಡಿದ್ದರು.

ADVERTISEMENT

ಇತ್ತೀಚೆಗೆ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ್ದಕ್ಕೆ ತೀವ್ರ ನೊಂದುಕೊಂಡಿದ್ದ ಲಿಯೊನೆಡ್ ಅವರು, ‘ರಷ್ಯಾ ಆಕ್ರಮಣ ಮಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಅದು ಉಕ್ರೇನ್‌ನ್ನು ನಿರ್ನಾಮ ಮಾಡುವ ಗುರಿಯನ್ನೇ ಹೊಂದಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.