ಕೀವ್: ರಷ್ಯಾ ದಾಳಿ ಮುಂದುವರಿದ ಪರಿಣಾಮ2ನೇ ದಿನವಾದ ಭಾನುವಾರವೂ ಯುದ್ಧಪೀಡಿತ ನಗರಗಳಲ್ಲಿ ಸಿಲುಕಿದ್ದ ಪ್ರಜೆಗಳನ್ನು ತೆರವುಗಳಿಸಲು ಸಾಧ್ಯವಾಗಿಲ್ಲ ಎಂದು ಉಕ್ರೇನ್ ಸರ್ಕಾರ ಹೇಳಿದೆ.
ಭಾನುವಾರ ರಷ್ಯಾ ಕದನ ವಿರಾಮ ಘೋಷಿಸುವ ಸಾಧ್ಯತೆಯಿದ್ದ ಕಾರಣ ಯುದ್ಧಪೀಡಿತ ಮರಿಯೋಪೊಲ್ ಬಂದರು ಪ್ರದೇಶದಲ್ಲಿದ್ದ ಜನರನ್ನು ತೆರವುಗೊಳಿಸಲು ಉಕ್ರೇನ್ ಸರ್ಕಾರ ಯೋಜಿಸಿತ್ತು. ಆದರೆ ರಷ್ಯಾ ಯುದ್ಧವನ್ನು ಮುಂದುವರಿಸಿದ ಕಾರಣದಿಂದಾಗಿ ಅವರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಉಕ್ರೇನ್ ಗೃಹ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.