ADVERTISEMENT

ದೂರಗಾಮಿ ಶೆಲ್‌, ಕಿರುಕ್ಷಿಪಣಿ ಬಳಸಲು ಅನುಮತಿ ನೀಡಿ: ಝೆಲೆನ್‌ಸ್ಕಿ

ರಾಯಿಟರ್ಸ್
Published 6 ಸೆಪ್ಟೆಂಬರ್ 2024, 23:30 IST
Last Updated 6 ಸೆಪ್ಟೆಂಬರ್ 2024, 23:30 IST
ವೊಲೊಡಿಮಿರ್ ಝೆಲೆನ್‌ಸ್ಕಿ
ವೊಲೊಡಿಮಿರ್ ಝೆಲೆನ್‌ಸ್ಕಿ   

ರ್‍ಯಾಮ್‌ಸ್ಟೀನ್‌ ವಾಯುನೆಲೆ, ಜರ್ಮನಿ: ‘ರಷ್ಯಾ ಸೈನಿಕರನ್ನು ನಮ್ಮ ನೆಲದಿಂದ ಹಿಮ್ಮೆಟ್ಟಿಸುವುದು ಮಾತ್ರವಲ್ಲ, ರಷ್ಯಾದ ಮೇಲೆಯೂ ದಾಳಿ ನಡೆಸಬೇಕಿದೆ. ಇದಕ್ಕಾಗಿ ದೂರಗಾಮಿ ಶೆಲ್‌, ಕಿರುಕ್ಷಿಪಣಿಗಳನ್ನು ಬಳಸಲು ಅನುಮತಿ ನೀಡಬೇಕು’ ಎಂದು ಉಕ್ರೇನ್‌ ಪ್ರಧಾನಿ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದರು.

ಇದೇ ವೇಳೆ ರಷ್ಯಾದ ಎಚ್ಚರಿಕೆ ನೀಡಿದ ಮಧ್ಯೆಯೇ ಅಮೆರಿಕವು ಉಕ್ರೇನ್‌ಗೆ ₹250 ಮಿಲಿಯನ್‌ ಡಾಲರ್‌ (₹2,098 ಕೋಟಿ) ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ನೀಡುವುದಾಗಿ ಘೋಷಿಸಿದೆ. 

ಉಕ್ರೇನ್‌ಗೆ ಸೇನಾ ಪರಿಕರಗಳನ್ನು ಪೂರೈಸುತ್ತಿರುವ ದೇಶಗಳ ಸಭೆಯನ್ನು ಅಮೆರಿಕವು ಶುಕ್ರವಾರ ಇಲ್ಲಿ ಆಯೋಜಿಸಿತ್ತು. ‘ರಷ್ಯಾದ ಮೇಲೆ ಇತ್ತೀಚೆಗಷ್ಟೇ ಅನಿರೀಕ್ಷಿತ ದಾಳಿ ನಡೆಸಿದ್ದೇವೆ. ಇದಾದ ಬಳಿಕ, ನಮ್ಮ ಸೈನಿಕರಿಗೆ ಅಪಾಯ ಹೆಚ್ಚಿದೆ. ಆದ್ದರಿಂದ ಕಿರುಕ್ಷಿಪಣಿಗಳ ಬಳಿಕೆಯಿಂದಾಗಿ ರಷ್ಯಾದ ಮೇಲೆ ದಾಳಿ ನಡೆಸಿ, ಅದು ಶಾಂತಿ ಒಪ್ಪಂದಕ್ಕೆ ಬರುವಹಾಗೆ ಮಾಡಬಹುದು’ ಎಂದರು.

ADVERTISEMENT

‘ರಷ್ಯಾವು ತನ್ನ ಆಕ್ರಾಮಿಕ ದಾಳಿಯನ್ನು ಬದಿಗಿಟ್ಟು, ರಕ್ಷಣಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಇದು ಉಕ್ರೇನ್‌ನ ಕಠಿಣ ಪರಿಶ್ರಮವನ್ನು ತೋರಿಸುತ್ತದೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯಿಡ್‌ ಅಗಸ್ಟೀನ್‌ ಅಭಿಪ್ರಾಯಪಟ್ಟರು. ಇದೇ ತಿಂಗಳಿನಲ್ಲಿ ಝೆಲೆನ್‌ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿ ಮಾಡಲಿದ್ದು, ‘ಗೆಲುವಿನ ಯೋಜನೆ’ಯ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ವಿಮಾನ ಅಥವಾ ಹೆಲಿಕಾಪ್ಟರ್‌ ಮೂಲಕ ನೆಲದ ಮೇಲಿನ ಗುರಿಗಳಿಗೆ ದಾಳಿ ನಡೆಸುವಂಥ ಸುಮಾರು 80,840 ಕ್ಷಿಪಣಿಗಳನ್ನು ಉಕ್ರೇನ್‌ಗೆ ನೀಡಲು ಕೆನಡಾ ಮುಂದಾಗಿದೆ. ಇದರ ಜೊತೆಗೆ, ‘1,300 ಸಿಡಿತಲೆಗಳು, 64 ಶಸ್ತ್ರಸಜ್ಜಿತ ಕಾರುಗಳನ್ನೂ ಮುಂದಿನ ದಿನಗಳಲ್ಲಿ ನೀಡಲಿದ್ದೇವೆ’ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.