ADVERTISEMENT

ರಷ್ಯಾದಿಂದ 14 ಚದರ ಕಿ.ಮೀ ಪ್ರದೇಶ ಮರುವಶಕ್ಕೆ ಪಡೆದ ಉಕ್ರೇನ್‌

ಎಎಫ್‌ಪಿ
Published 10 ಜುಲೈ 2023, 12:53 IST
Last Updated 10 ಜುಲೈ 2023, 12:53 IST
.
.   

ಕೀವ್ (ಉಕ್ರೇನ್‌): ರಷ್ಯಾ ಅತಿಕ್ರಮಣ ಮಾಡಿದ್ದ 14 ಚದರ ಕಿಲೋ ಮೀಟರ್‌ ಪ್ರದೇಶವನ್ನು ಮರುವಶಕ್ಕೆ ಪಡೆಯಲಾಗಿದೆ ಎಂದು ಉಕ್ರೇನ್‌ ಸೋಮವಾರ ತಿಳಿಸಿದೆ.

ಕಳೆದವಾರ ಉಕ್ರೇನ್‌ ಸೇನಾ ಪಡೆಯು ಬಖ್‌ಮತ್ ಸೆಕ್ಟರ್‌ನಲ್ಲಿ ನಾಲ್ಕು ಚದರ ಕಿಲೋಮೀಟರ್‌ ಪ್ರದೇಶ ಸೇರಿದಂತೆ ಹತ್ತಕ್ಕೂ ಹೆಚ್ಚು ಚದರ ಕಿಲೋಮೀಟರ್‌ ಪ್ರದೇಶವನ್ನು ರಷ್ಯಾದ ಅತಿಕ್ರಮಣದಿಂದ ಸ್ವತಂತ್ರಗೊಳಿಸಿದೆ ಎಂದು ಸೇನಾ ವಕ್ತಾರ ಆ್ಯಂಡ್ರಿಯ್‌ ಕೊವಲ್‌ಯೊಯ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಷ್ಯಾ ಪಡೆಗಳು ಮೇನಲ್ಲಿ ವಶಕ್ಕೆ ಪಡೆದಿದ್ದ ಬಖ್‌ಮತ್‌ ಪ್ರದೇಶದಲ್ಲಿ ಉಭಯ ದೇಶಗಳ ಸೇನಾಪಡೆಗಳ ಮಧ್ಯೆ ತೀವ್ರ ಹೋರಾಟ ನಡೆದಿತ್ತು ಎಂದೂ ತಿಳಿಸಿದ್ದಾರೆ. ಇದರೊಂದಿಗೆ ಉಕ್ರೇನ್‌ ಕಳೆದ ತಿಂಗಳಿಂದ ಈಚೆಗೆ 193 ಚದರ ಕಿಲೋಮೀಟರ್‌ ಪ್ರದೇಶವನ್ನು ಮರುವಶಕ್ಕೆ ಪಡೆದಂತಾಗಿದೆ.

ADVERTISEMENT

ಶಾಲೆ ಮೇಲೆ ರಷ್ಯಾ ವಾಯುದಾಳಿ:

ದಕ್ಷಿಣ ಉಕ್ರೇನ್‌ನಲ್ಲಿನ ಶಾಲೆಯೊಂದರ ಮೇಲೆ ರಷ್ಯಾ ವಾಯುದಾಳಿ ನಡೆಸಿದ್ದು, ಮೂವರು ಮಹಿಳೆಯರು ಸೇರಿದಂತೆ ನಾಲ್ವರು  ಮೃತಪಟ್ಟಿದ್ದಾರೆ. 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾನವೀಯ ನೆರವು ಪಡೆಯಲು ಜನರು ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ಝಪೊರಿಝಜಿಯಾ ಪ್ರದೇಶದ ಗವರ್ನರ್‌ ತಿಳಿಸಿದ್ದಾರೆ. 

ದಾಳಿಯನ್ನು ‘ಯುದ್ಧ ಅಪರಾಧ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.