ADVERTISEMENT

ಉಕ್ರೇನ್ ಜನರನ್ನು ಕರೆದೊಯ್ಯಲು ಆಫ್ಗಾನ್‌ಗೆ ತೆರಳಿದ್ದ ವಿಮಾನ ಅಪಹರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2021, 8:36 IST
Last Updated 24 ಆಗಸ್ಟ್ 2021, 8:36 IST
   

ಮಾಸ್ಕೊ: ಉಕ್ರೇನ್ ಜನರನ್ನು ಕರೆದೊಯ್ಯಲು ಅಫ್ಗಾನಿಸ್ತಾನಕ್ಕೆ ತೆರಳಿದ್ದ ವಿಮಾನವೊಂದನ್ನು ಅಪಹರಣ ಮಾಡಲಾಗಿದೆ.

ಅಪರಿಚಿತರು ವಿಮಾನವನ್ನು ಅಪಹರಿಸಿದ್ದು, ಇರಾನ್‌ನತ್ತ ಸಂಚರಿಸುವಂತೆ ಮಾಡಿದ್ದಾರೆ. ಈ ಕುರಿತು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್‌ಗ್ನೆನಿ ಯೆನಿನ್ ಮಾಹಿತಿ ನೀಡಿದ್ದಾರೆ ಎಂದು ರಷ್ಯಾದ ‘ಟಿಎಎಸ್‌ಎಸ್‌’ ಸುದ್ದಿಸಂಸ್ಥೆ ವರದಿ ಮಾಡಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.