ADVERTISEMENT

ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ: ವಿಶ್ವಸಂಸ್ಥೆ ಪ್ರಶಂಸೆ

ಪಿಟಿಐ
Published 2 ಮಾರ್ಚ್ 2019, 18:44 IST
Last Updated 2 ಮಾರ್ಚ್ 2019, 18:44 IST
ಅಂಟೊನಿಯೊ ಗುಟೆರಸ್‌
ಅಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ: ಮೂರು ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿರುವುದನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಸ್ವಾಗತಿಸಿದ್ದಾರೆ.

‘ಧನಾತ್ಮಕ ಕ್ಷಣವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಮತ್ತಷ್ಟು ರಚನಾತ್ಮಕ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಗುಟೆರಸ್‌ ಅವರು ಕರೆ ನೀಡಿದ್ದಾರೆ.

‘ಎರಡೂ ರಾಷ್ಟ್ರಗಳು ಒಪ್ಪಿದರೆ, ಮಾತುಕತೆಗಾಗಿ ಸೂಕ್ತ ವೇದಿಕೆ ಒದಗಿಸಲು ವಿಶ್ವಸಂಸ್ಥೆ ಕೂಡ ಸಿದ್ಧವಿದೆ’ ಎಂದು ಅವರ ವಕ್ತಾರ ಸ್ಟೀಫೆನ್‌ ಡುಜಾರಿಕ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.